“ಹಳ್ಳಿಹಕ್ಕಿ”ಗೆ ಬೇಸಿಗೆ, ಮಳೆಗಾಲ, ಚಳಿಗಾಲಕ್ಕೊಂದು ಗೂಡು ಇದೆ ಗೊತ್ತಾ? ಮಹೇಶ್ ತಿರುಗೇಟು

  |   Karnatakanews

ಮೈಸೂರು: ಮಾಜಿ ಶಾಸಕ ಹೆಚ್. ವಿಶ್ವನಾಥ್ ಎಂಥ ಕೊಚ್ಚೆಗುಂಡಿ ಎಂದು ಎಲ್ಲರಿಗೂ ಗೊತ್ತು. ಹಳ್ಳಿಹಕ್ಕಿ ಎಂದು ಯಾರು ಹೆಸರಿಟ್ಟರೋ ಗೊತ್ತಿಲ್ಲ. ಆದರೆ ವಿಶ್ವನಾಥ್ ಗೆ ಬೇಸಿಗೆ ಕಾಲಕ್ಕೊಂದು, ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು ಗೂಡು ಇದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಿಸುವ ಮೂಲಕ ಇಬ್ಬರ ನಡುವಿನ ವಾಕ್ಸಮರ ಮುಂದುವರಿದಂತಾಗಿದೆ.

ವಿಶ್ವನಾಥ್ ಸಾಧನೆ ಅನೇಕ ಇದೆ ಅದನ್ನೆಲ್ಲಾ ನಂತರ ಹೇಳೋಣ. ಕೆಆರ್ ನಗರದಲ್ಲಿ ತಹಸೀಲ್ದಾರ್ ಕುಟುಂಬ ಬೀದಿಗೆ ಹೇಗೆ ಬಂತು. ಕೆಆರ್ ನಗರದಲ್ಲಿ ನಿಮ್ಮಿಂದ ಕಷ್ಟ ಅನುಭವಿಸಿದವರು ಎಷ್ಟು ಮಂದಿ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಹೆಚ್.ವಿಶ್ವನಾಥ್ ಬ್ಲೂ ಬಾಯ್, ಬ್ಲೂ ಫಿಲ್ಮ್ ಹೀರೋ. ಯಾವ ಹೀರೋಯಿನ್, ಹೀರೋ ಜತೆ ಮಾತನಾಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಎಲ್ಲದರ ಬಗ್ಗೆಯೂ ಒಟ್ಟಾಗಿ ಮಾತನಾಡೋಣ, ನೀವು ಕರೆದ ದೇವಸ್ಥಾನಕ್ಕೆ ನಾನೂ ಬರುತ್ತೇನೆ ಎಂದು ಸವಾಲು ಸಾರಾ ಹಾಕಿದರು.

ಬ್ಲೂ ಫಿಲ್ಮ್ ಮಾಡಲು ಹೋಗಿ ಸಿಕ್ಕಿಹಾಕಿಕೊಂಡವನಲ್ಲ. ಯಾರದ್ದೋ ಮನೆಯ ಲೋಟ ತೊಳೆದಿಲ್ಲ. ಯಾರ ಮನೆಯ ಚಡ್ಡಿ ತೊಳೆದಿಲ್ಲ. ನಾನು ಯಾರಿಗೂ ಮಾರಿಕೊಂಡವನಲ್ಲ. ಹೇ ಅಯೋಗ್ಯ ನನ್ನ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ ಎಂದು ಹೆಚ್.ವಿಶ್ವನಾಥ್ ಭಾನುವಾರ ಸಾರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಫೋಟೋ - http://v.duta.us/5YgzHwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5ybHWgAA

📲 Get Karnatakanews on Whatsapp 💬