ಅಂತರ್ಜಲ ವೃದ್ಧಿಗೆ ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆ

  |   Dakshina-Kannadanews

ಭೂಮಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಕುಂಟಿಕಾನದ ಗೊಲ್ಲಚಿಲ್ನ ಕೆ. ಮಹಾಲಿಂಗ ಪಾಟಾಲಿ ಅವರು ಸುಮಾರು 4 ವರ್ಷಗಳ ಹಿಂದೆ ತಮ್ಮ ಮನೆಯಲ್ಲಿನ ಬೋರ್‌ವೆಲ್ಗೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದರು.

ಮಹಾಲಿಂಗ ಅವರ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ ನೀರಿನ ಸಮಸ್ಯೆ ಉಂಟಾಗಿತ್ತು. ಒಂದೆಡೆ ಅಂತರ್ಜ ಮಟ್ಟ ಏರುತ್ತದೆ. ಅಲ್ಲದೆ, ನೀರಿನ ಸಮಸ್ಯೆಗೂ ಮುಕ್ತಿ ದೊರಕುತ್ತದೆ ಎಂಬ ಉದ್ದೇಶದಿಂದ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ.

ಇದೀಗ ಅವರ ಮನೆಯಲ್ಲಿ ನೀರಿನ ಸಮಸ್ಯೆ ತಲೆದೋರುವುದಿಲ್ಲ. ಅಗತ್ಯಕ್ಕೆಂದು ಪಾಲಿಕೆ ನೀರಿನ ಸರಬರಾಜು ಕೂಡ ಇದೆ. ಒಂದು ವೇಳೆ ಪಾಲಿಕೆ ನೀರು ನಿಂತು ಹೋದರೆ ತಮ್ಮ ಮನೆಯ ಬೋರ್‌ವೆಲ್ನಿಂದ ನೀರು ಉಪಯೋಗಿಸುತ್ತಾರೆ.

ಮಳೆ ನೀರು ಪೋಲಾಗಬಾರದು ಎಂಬ ಉದ್ದೇಶದಿಂದ ಟೆರೇಸ್‌ ಮನೆಯ ಮೇಲ್ಛಾವಣಿಗೆ ಪೈಪ್‌ ಅಳವಡಿಸಿ ಅದರನ್ನು ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಕಸ, ಕಡ್ಡಿಗಳು ನೀರಿನ ಜತೆ ಬೋರ್‌ವೆಲ್ಗೆ ಹೋಗಬಾರದೆಂದು ಫಿಲ್ಟರ್‌ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

ಅಭಿಯಾನದಿಂದ ಪ್ರೇರಣೆ

ಉಳ್ಳಾಲದ ಮಾಸ್ತಿಕಟ್ಟೆಯ ಅಬ್ದುಲ್ ರೆಹಮಾನ್‌ ಅವರು ತಮ್ಮ ಮನೆಯಲ್ಲಿ ಕೆಲವು ದಿನಗಳ ಹಿಂದೆ ಮಳೆಕೊಯ್ಲು ಅಳವಡಿಸಿದ್ದಾರೆ. ‘ಉದಯವಾಣಿ ಸುದಿನ’ದಲ್ಲಿ ಪ್ರಕಟವಾಗುತ್ತಿರುವ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ....

ಫೋಟೋ - http://v.duta.us/cEhO9wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/z0R67AAA

📲 Get Dakshina Kannada News on Whatsapp 💬