ಆಡಳಿತ ವರ್ಗ ಶಿಕ್ಷಕರ ಸಂಕಟ ನಿವಾರಿಸಲಿ

  |   Kalburaginews

ಕಲಬುರಗಿ: ದೇಶ ನಿರ್ಮಾಣದ ಶಿಲ್ಪಿಗಳಾದ ಶಿಕ್ಷಕರು ಅನೇಕ ಸಂಕಟಗಳಲ್ಲಿ ಬೆಂದು ಹೋಗುತ್ತಿದ್ದಾರೆ. ಆಡಳಿತ ವರ್ಗ ಕಣ್ತೆರೆದು ಶಿಕ್ಷಕರ ಸಂಕಟಗಳನ್ನು ಪರಿಹರಿಸಬೇಕೆಂದು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು ಆಗ್ರಹಿಸಿದರು.

ನಗರ ಹೊರವಲಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕರ ದಿನಾಚರಣೆ ದಿನದಂದು ಶಿಕ್ಷಕರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು ಉತ್ತಮ ಕಾರ್ಯ. ಆದರೆ, ಶಿಕ್ಷಕರು ನೆಮ್ಮದಿಯಿಂದ ಕಾರ್ಯ ನಿರ್ವಹಿಸಲಾಗದ ಪರಿಸ್ಥಿತಿ ಇದೆ. ಶಿಕ್ಷಕರಿಗೆ ಪ್ರತಿ ತಿಂಗಳು ಸಿಗಬೇಕಾದ ಸಂಬಳ ವರ್ಷದಲ್ಲಿ ಮೂರ್‍ನಾಲು ಬಾರಿ ಸಿಗುತ್ತದೆ. ದನ ಗಣತಿ, ಜನ ಗಣತಿ, ಆಧಾರ್‌ ಕಾರ್ಡ್‌ ಜೋಡಣೆ, ಬಟ್ಟೆ ಹಂಚೋದು, ತರಕಾರಿ ಲೆಕ್ಕ ಹಾಕೋದು, ಶಾಲೆ ತೊಳಿಯೋದು ಹೀಗೆ ‘ಶೂ ಪಾಲೀಶ್‌’ ಕೆಲಸವೊಂದನ್ನು ಬಿಟ್ಟು 22 ಕಾರ್ಯಕ್ರಮಗಳನ್ನು ಶಿಕ್ಷಕರ ಹೆಗಲಿಗೆ ವಹಿಸಲಾಗಿದೆ. ಇಷ್ಟು ಕಾರ್ಯಗಳನ್ನು ಮಾಡಿ ತರಗತಿಯಲ್ಲಿ ಶಿಕ್ಷಕರು ಪಾಠ ಬೋಧಿಸುವುದು ಯಾವಾಗ ಎಂದು ಪ್ರಶ್ನಿಸಿದರು....

ಫೋಟೋ - http://v.duta.us/fcpRewAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/cD8xwgAA

📲 Get Kalburagi News on Whatsapp 💬