ಈರುಳ್ಳಿ-ಮೆಣಸಿನಕಾಯಿಗೆ ರೋಗಬಾಧೆ

  |   Gadagnews

ನರೇಗಲ್ಲ: ಜಿನುಗು ಮಳೆಯಿಂದ ಈರುಳ್ಳಿ-ಮೆಣಸಿನ ಕಾಯಿ ಬೆಳೆಗೆ ಬೂದಿ, ಮಜ್ಜಿಗೆ, ಮುಟ್ಟಿಗೆ ರೋಗ ಹಾಗೂ ಕೀಟಬಾಧೆ ಸೇರಿದಂತೆ ಇತರೆ ರೋಗಗಳು ತಗುಲಿದ್ದು, ರೈತರು ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.

ಈಗಾಗಲೇ ಮಳೆ ಕೊರತೆ, ಅಂತರ್ಜಲ ಕುಸಿತ, ವಿದ್ಯುತ್‌ ಸಮಸ್ಯೆ, ಕೂಲಿಕಾರರ ಸಮಸ್ಯೆ ಹಾಗೂ ಇತರೆ ಹತ್ತಾರು ಸಮಸ್ಯೆಗಳ ನಡುವೆ ಕಂಗೆಟ್ಟಿರುವ ಇಲ್ಲಿನ ರೈತರು ಒಣ ಬೇಸಾಯ ಹಾಗೂ ನೀರಾವರಿಯ ಕೊಳವೆ ಬಾವಿಗಳಲ್ಲಿರುವ ನೀರನ್ನು ಉಪಯೋಗಿಸಿಕೊಂಡು ಮುಂಗಾರು ಹಂಗಾಮಿಗೆ ಈರುಳ್ಳಿ ಹಾಕಿದರೆ ಕೊಳವೆ ರೋಗ, ಮಜ್ಜಿಗೆ ರೋಗ, ಬೂದಿ ರೋಗ, ಮುಟ್ಟಿಗೆ ರೋಗ ತಗುಲಿದೆ.

ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ 4500 ಹೆಕ್ಟೇರ್‌ನಲ್ಲಿ ಈರುಳ್ಳಿ, ಮೆಣಸಿನ ಕಾಯಿ ಬೆಳೆ ನಾಟಿ ಮಾಡಿದ್ದಾರೆ. ರೈತರ ಜಮೀನಿನಲ್ಲಿ ಬೆಳೆದಿರುವ ಬೆಳೆಗಳಿಗೆ ಈಗ ನಾನಾ ರೋಗಗಳು ತಗುಲಿ ಎದೆಗುಂದುವಂತೆ ಮಾಡಿವೆ. ಈರುಳ್ಳಿ, ಮೆಣಸಿನ ಬೆಳೆಗಳಿಗೆ ಸಂಪೂರ್ಣ ರೋಗಕ್ಕೆ ತುತ್ತಾಗಿದೆ. ಈ ರೋಗದಿಂದಾಗಿ ಗಡ್ಡೆಗಳು ದೊಡ್ಡವಾಗದೆ ಪೀಚುಗಡ್ಡೆಗಳಾಗಿವೆ. ಅಲ್ಲದೇ, ಮೇಲಿನ ಎಲೆಗಳು ಬೂದಿ ಹಾಗೂ ಮಜ್ಜಿಗೆ ರೋಗದಿಂದ ಒಣಗುತ್ತಿದ್ದು, ಗಡ್ಡೆಗಳನ್ನು ಕಿತ್ತು ಹಾಕಲು ರೈತರು ನಿರ್ಧರಿಸಿದ್ದಾರೆ....

ಫೋಟೋ - http://v.duta.us/uzmNigAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/dA7DjQAA

📲 Get Gadag News on Whatsapp 💬