ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಆಕ್ರೋಶ

  |   Raichurnews

ದೇವದುರ್ಗ: ಕೃಷಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜರುಗಿತು.

ತಾಪಂ ಅಧ್ಯಕ್ಷ ಹನುಮಂತಪ್ಪ ಕಟ್ಟಿಮನಿ ಮಿಯ್ನಾಪುರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಪಂ ಸದಸ್ಯರಾದ ಗೋವಿಂದರಾಜ ನಾಯಕ, ಮಲ್ಲಿನಾಥಗೌಡ ಪಲಕನಮರಡಿ, ಹನುಮಯ್ಯ ಭೂಮನಗುಂಡ ಇತರರು ಮಾತನಾಡಿ, ಕೃಷಿ ಇಲಾಖೆಯಲ್ಲಿ ಅರ್ಹ ರೈತರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಮಧ್ಯವರ್ತಿಗಳಿಗೆ ಸಾವಿರಾರು ರೂ. ಲಂಚ ಕೊಟ್ಟರೆ ಮಾತ್ರ ಕೃಷಿ ಉಪಕರಣಗಳು ಸಿಗುತ್ತವೆ ಎಂದು ದೂರಿದರು. ಆನ್‌ಲೈನ್‌ ಅರ್ಜಿ ಸಲ್ಲಿಸಬೇಕೆನ್ನುತ್ತಿರಿ. ಆದರೆ ಮಧ್ಯವರ್ತಿಗಳಿಗೆ ಅದ್ಹೇಗೆ ನಿಗದಿತ ಅವಧಿಯೊಳಗೆ ಸೌಲಭ್ಯ ಒದಗಿಸುತ್ತಿರಿ ಎಂದು ಕೃ ಇಲಾಖೆ ಸಹಾಯಕ ಅಧಿಕಾರಿ ಸಿದ್ದಾರೆಡ್ಡಿ ಅವರನ್ನು ಪ್ರಶ್ನಿಸಿದರು.

60 ವರ್ಷ ಆದ ಅಂಗನವಾಡಿ ಕಾಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ನೀಡಲಾಗುವುದು. ಈಗಾಗಲೇ ಈ ಕುರಿತು ಎಲ್ಲ ಅಂಗನವಾಡಿ ಕೇಂದ್ರಗಳ ಸಿಬ್ಬಂದಿ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಮೊಟ್ಟೆ ಖರಿದೀಸಿ ವಿತರಿಸುವುದು ಕಾರ್ಯಕರ್ತೆಯರ ಕರ್ತವ್ಯ. ಮೊಟ್ಟೆ ಖರೀದಿ ಮೊತ್ತವನ್ನು ಬಾಲವಿಕಾಸ ಸಮಿತಿ ಖಾತೆಗೆ ಜಮೆ ಮಾಡಲಾಗುವುದು ಎಂದು ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಲತಾ ಸಭೆಗೆ ತಿಳಿಸಿದರು....

ಫೋಟೋ - http://v.duta.us/nMITUQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FERmswAA

📲 Get Raichur News on Whatsapp 💬