ಡಾ|ರಾಧಾಕೃಷ್ಣನ್‌ ಸರಳ-ಸಜ್ಜನ ವ್ಯಕ್ತಿ: ಎಲ್.ಟಿ. ಪಾಟೀಲ್

  |   Uttara-Kannadanews

ಮುಂಡಗೋಡ: ಶಿಕ್ಷಕರು ಹೆಮ್ಮೆಪಡುವ ದಿನ ಇದಾಗಿದೆ. ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಒಬ್ಬ ಸರಳ ಸಜ್ಜನ ವ್ಯಕ್ತಿ. ರಾಷ್ಟ್ರದ ಅತ್ಯುನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು ಎಂದು ಜಿಪಂ ಸದಸ್ಯ ಎಲ್.ಟಿ. ಪಾಟೀಲ ಹೇಳಿದರು.

ಅವರು ಪಟ್ಟಣದ ಲೊಯೋಲಾ ವಿಕಾಸ ಕೇಂದ್ರದಲ್ಲಿ ನಡೆದ ಗುರು ಗೌರವಾರ್ಪಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ತಂದೆ-ತಾಯಿ ಮಾತು ಮೀರಿದರೂ ಗುರುಗಳ ಮಾತನ್ನು ಮೀರುವುದಿಲ್ಲ ಅಂತಹ ಸಾಮರ್ಥ್ಯ ಗುರುವಿಗಿದೆ ಎಂದರು.

ಹುಬ್ಬಳ್ಳಿಯ ಕಿರಣರಾಮ ಪಾಟೀಲ ಉಪನ್ಯಾಸ ನೀಡಿ ರಾಧಾಕೃಷನ್‌¡ ಅವರು ತತ್ವಶಾಸ್ತ್ರ ಪುಸ್ತಕವನ್ನು ಬರೆದು ಇಡೀ ಜಗತ್ತಿಗೇ ಪ್ರಚಾರ ಮಾಡಿದವರು ಮತ್ತು ಅದು ಇವತ್ತಿಗೂ ಪ್ರಚಲಿತವಾಗಿದೆ. ಶಿಕ್ಷಕರ ವೃತ್ತಿ ಸೇವೆಯಾಗದೇ ತ್ಯಾಗವಾಗಬೇಕು ಎಂದರು.

ಜಿಪಂ ಸದಸ್ಯೆ ಜಯಮ್ಮ ಹಿರೇಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ದಾಕ್ಷಾಯಣಿ ಸುರಗಿಮಠ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಉದ್ಯಮಿ ಕೃಷ್ಣಾ ಹಿರೇಹಳ್ಳಿ, ತಾಪಂ ಇಒ ಪ್ರವೀಣ ಕಟ್ಟಿ, ಬಿಆರ್‌ಸಿ ಸಂಯೋಜಕ ಜಿ.ಎನ್‌. ನಾಯ್ಕ, ಶಿಕ್ಷಕರಾದ ಪ್ರದೀಪ ಕುಲಕರ್ಣಿ, ದಯಾನಂದ ನಾಯ್ಕ, ರಮೇಶ ಅಂಬಿಗೇರ, ಎಸ್‌.ಡಿ.ಎಸ್‌.ಎಫ ಲಮಾಣಿ, ಹರಿ ನಾಯ್ಕ, ಶೀಲಾ ರಾಠೊಡ, ಶಿಕ್ಷಕರು ಇದ್ದರು....

ಫೋಟೋ - http://v.duta.us/4nCsIQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/l21nEAAA

📲 Get Uttara Kannada News on Whatsapp 💬