ಮಗಳು ತೀರಿಹೋದ ವಿಷಯ ಕಂಡಕ್ಟರ್ ಗೆ ತಿಳಿಸದೇ ಕೆಲಸ ಮಾಡಿಸಿದ ಅಧಿಕಾರಿ

  |   Karnatakanews

ಗಂಗಾವತಿ: ಮಗಳು ಟೈಫಾಯ್ಡ್ ಜ್ವರದಿಂದ ಬಳಲಿ ಮೃತಪಟ್ಟರೂ ಕರ್ತವ್ಯದಲ್ಲಿದ್ದ ತಂದೆಗೆ ವಿಷಯ ತಿಳಿಸದೇ ಅಮಾನವೀಯತೆ ಪ್ರದರ್ಶಿಸಿದ ಘಟನೆ ಗಂಗಾವತಿ ಈಶಾನ್ಯ ಸಾರಿಗೆ ಸಂಸ್ಥೆಯ ಡಿಪೋದಲ್ಲಿ ಜರುಗಿದೆ.

ಇಲ್ಲಿಯ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ ಬಿಲ್ಲೆ ನಂಬರ 310 ಇವರು ಮೂಲತಃ ಬಾಗಲಕೋಟೆ ಜಿಲ್ಲೆ ರಾಂಪೂರ ಗ್ರಾಮದ ನಿವಾಸಿಯಾಗಿದ್ದು ಇವರ ಮಗಳು ಕವಿತಾ(11) ಬುಧವಾರ ಬೆಳ್ಳಿಗ್ಗೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಗಂಗಾವತಿ ಡಿಪೋಗೆ ದೂರವಾಣಿ ಕರೆ ಮಾಡಿ ಮಗಳು ಸತ್ತ ವಿಷಯ ಸಂಬಂಧಿಕರು ತಿಳಿಸಿದ್ದಾರೆ. ಗಂಗಾವತಿ ಕೊಲ್ಲಾಪುರ ಮಾರ್ಗದಲ್ಲಿ ಕರ್ತವ್ಯದಲ್ಲಿ ಕಂಡಕ್ಟರ್ ಮಂಜುನಾಥ ಅವರಿಗೆ ಈಶಾನ್ಯ ಸಾರಿಗೆಯ ಟ್ರಾಫಿಕ್ ಅಧಿಕಾರಿ ಹೇಮಾವತಿ ನಿರ್ಲಕ್ಷ್ಯದಿಂದ ವಿಷಯ ತಿಳಿಸಿರಲಿಲ್ಲ. ಗುರುವಾರ ಸಂಜೆ ಕರ್ತವ್ಯ ಮುಗಿಸಿದ ನಂತರ ವಿಷಯ ತಿಳಿದಿದ್ದರಿಂದ ಮಂಜುನಾಥ ತೀವ್ರ ಆತಂಕಗೊಡಿದ್ದಾರೆ.

ಈಶಾನ್ಯ ಸಾರಿಗೆಯ ಕಂಡಕ್ಟರ್ ಚಾಲಕರಿಗೆ ಈ ವಿಷಯ ತಿಳಿದು ಎಟಿಐ ಕ್ರಮ ಖಂಡಿಸಿದ್ದಾರೆ. ಡಿಪೋ ಮ್ಯಾನೇಜರ್ ಎಸ್.ಆರ್.ಸೋನ್ನದ್ ಅವರಿಗೆ ಮಾಹಿತಿ ತಿಳಿದ ತಕ್ಷಣ ಇನ್ನೋರ್ವ ಕಂಡಕ್ಟರ್ ಅವರನ್ನು ಜತೆ ಮಾಡಿ ರಾಂಪೂರ ಗ್ರಾಮಕ್ಕೆ ಕಳಿಸಿದ್ದಾರೆ. ನಿರ್ಲಕ್ಷ್ಯ ಮಾಡಿದ ಎಟಿಐ ವಿರುದ್ದ ಕ್ರಮ ಜರುಗಿಸುವಂತೆ ಆಕ್ರೋಶ ವ್ಯಕ್ತವಾಗಿದೆ.

ಫೋಟೋ - http://v.duta.us/jdrfjwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7RgQXgAA

📲 Get Karnatakanews on Whatsapp 💬