ಮತ್ತೆ ಅಪಾಯದಲ್ಲಿ ಮುಳುಗಡೆ ಜಿಲ್ಲೆ !

  |   Bagalkotnews

ಬಾಗಲಕೋಟೆ : ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳ ಹಿನ್ನೀರಿನಿಂದ ಜಿಲ್ಲೆಯ ಬಹುಭಾಗ ಮುಳುಗಡೆಗೊಂಡು ಮುಳುಗಡೆ ಜಿಲ್ಲೆ ಎಂದೇ ಕರೆಸಿಕೊಳ್ಳುವ ಬಾಗಲಕೋಟೆ, ತಿಂಗಳೋಳಗೆ ಮತ್ತೆ ಪ್ರವಾಹ ಎದುರಿಸುವ ಭೀತಿ ಕಾಡುತ್ತಿದೆ. ಜಿಲ್ಲೆಯ ಮೂರು ನದಿಗಳು ಮತ್ತೊಮ್ಮೆ ತುಂಬಿ ಹರಿದರೆ, ಈಗಾಗಲೇ ಸಂತ್ರಸ್ತರಾಗಿರುವ ಜನರ ಬದುಕು, ಸಂಪೂರ್ಣ ಬೀದಿ ಪಾಲಾಗಲಿದೆ.

ಹೌದು, 105 ವರ್ಷಗಳ ಬಳಿಕ ಜಿಲ್ಲೆ, ಭೀಕರ ಪ್ರವಾಹ ಕಂಡಿದೆ. ಮೂರೂ ನದಿಗಳು, ಜಿಲ್ಲೆಯ 195 ಹಳ್ಳಿಗರ ಬದುಕನ್ನು ಛಿದ್ರಗೊಳಿಸಿವೆ. ಇದೀಗ ಪುನಃ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ, ಮತ್ತೊಮ್ಮೆ ಪ್ರವಾಹದ ಆತಂಕ ಎದುರಾಗಿದೆ.

ಕಳೆದ ತಿಂಗಳಷ್ಟೇ ಮೂರು ನದಿಗಳ ಪ್ರವಾಹದಿಂದ ನಲುಗಿ, ಮನೆ, ಬೆಳೆ, ಮನೆಯಲ್ಲಿನ ದೈನಂದಿನ ಬದುಕಿನ ಎಲ್ಲ ಸಾಮಗ್ರಿ ಕಳೆದುಕೊಂಡಿರುವ 195 ಹಳ್ಳಿಗಳ, 43,136 ಕುಟುಂಬಗಳ 1,49,408 ಜನರು, ಇದೀಗ ತಮ್ಮ ಮನೆಗಳತ್ತ ತೆರಳುತ್ತಿದ್ದಾರೆ. ಮನೆಗಳು ಸಂಪೂರ್ಣ ಬಿದ್ದಿದ್ದರಿಂದ 12,764 ಜನರು ಇಂದಿಗೂ ತಾತ್ಕಾಲಿಕ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ ಪುನಃ ಪ್ರವಾಹ ಬಂದರೆ, ಜನ ಜೀವನ ಮತ್ತಷ್ಟು ಬಿಡಗಾಯಿಸಲಿದೆ....

ಫೋಟೋ - http://v.duta.us/kNFy_wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/aUuV0wAA

📲 Get Bagalkot News on Whatsapp 💬