ಮೊಬೈಲ್ ಯುಗದಲ್ಲಿ ಸೊರಗಿದೆ ಜಾನಪದ

  |   Bidarnews

ಬೀದರ: ಇಂದಿನ ಮೊಬೈಲ್ ಯುಗದಲ್ಲಿ ಜಾನಪದ ಸಂಸ್ಕೃತಿ ಸೊರಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಹೇಳಿದರು.

ಪ್ರತಾಪ ನಗರದ ಮೆಟ್ರಕ್‌ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಗುರುಶಿಷ್ಯ ಪರಂಪರೆ ಜಾನದಪ ಸಂಗೀತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆದರೆ ಯುವ ವಿದ್ಯಾರ್ಥಿಗಳನ್ನು ಜಾನಪದದ ಸೊಗಡಿನತ್ತ ಸೆಳೆಯಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿರುವುದು ಶ್ಲಾಘನೀಯ ಎಂದರು.

ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕಿ ಡಾ| ಮಹೇಶ್ವರಿ ಹೇಡೆ ಉಪನ್ಯಾಸ ನೀಡಿ, ಗುರು ಎಂದರೆ ದೀಪ. ಆ ದೀಪ ನೂರಾರು ಮನೆಗಳನ್ನು ಬೆಳಗುತ್ತದೆ. ಜನಪದ ಅಂದರೆ ಅದೊಂದು ಖುಷಿ. ಅದು ಸಹಜವಾಗಿ ಬಂದ ಸಾಹಿತ್ಯವಾಗಿದೆ. ಸಂಗೀತ ಕಲೆಗೆ ನಮ್ಮಲ್ಲಿ ವಿಶೇಷ ಮಾನ್ಯತೆ ಇದೆ. ಇದಕ್ಕೆ ಯಾವುದೇ ಅಕ್ಷರ ಜ್ಞಾನ ಕೂಡ ಬೇಕಿಲ್ಲ. ಉತ್ತಮವಾದ ಸಂಗೀತ ಪ್ರತಿಭೆಗೆ ಒಂದಿಲ್ಲೊಂದು ದಿನ ಉತ್ತಮ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಅದಕ್ಕೆ ನಾವು ಯಾವುದೇ ಸಿದ್ಧತೆ ಮಾಡಿಕೊಳ್ಳಬೇಕಿಲ್ಲ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು....

ಫೋಟೋ - http://v.duta.us/E4Lm8QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Wejd2AAA

📲 Get Bidar News on Whatsapp 💬