ಲೋಕಾ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

  |   Bellarynews

ಹರಪನಹಳ್ಳಿ: ಪಟ್ಟಣದ ತಾಲೂಕು ಕಚೇರಿ ರಾಜೀವಗಾಂಧಿ ಸಭಾಂಗಣದಲ್ಲಿ ಗುರುವಾರ ಲೋಕಾಯುಕ್ತ ಸಿಪಿಐ ವಂಸತ್‌ ವಿ.ಅಸೋದೆ ಮತ್ತು ಏರಿಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ನಂತರ ಸಭೆ ನಡೆಸಿದರು.

ಹಾರಕನಾಳು, ಗುಂಡಗತ್ತಿ ಗ್ರಾಮ ಪಂಚಾಯಿತಿ, ಪುರಸಭೆ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 10 ದೂರು ಸಲ್ಲಿಕೆಯಾದವು. ಹಗರಿಗಜಾಪುರ ಗ್ರಾಮದ ರೈತ ಸುರೇಶ್‌ 1968ರಿಂದಲೂ ನಾನು ಭೂಮಿ ಉಳಿಮೆ ಮಾಡುತ್ತ ಬಂದಿದ್ದೇನೆ. ಆದರೆ ಈಗ ಏಕಾಏಕಿ ಬೇರೆಯವರ ಹೆಸರಿಗೆ ಬದಲಾವಣೆಯಾಗಿದೆ ಎಂದು ದೂರಿದಾಗ ನಾವು ಕಾನೂನು ಚೌಕಟ್ಟಿನಲ್ಲೇ ಕಾರ್ಯನಿರ್ವಹಿಸಿದ್ದೇವೆ. ನಿಮಗೆ ಯಾವುದೇ ರೀತಿ ಅನುಮಾನಗಳು ಇದ್ದಲ್ಲಿ ಮೇಲಧಿಕಾರಿಗಳಿಗೆ ದೂರು ನೀಡಬಹುದು ಎಂದು ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌ ಸಮಜಾಯಿಷಿ ನೀಡಿದರು.

ಹಾರಕನಾಳು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ ತಾಪಂ ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ಶಶಿಕುಮಾರನಾಯ್ಕ, ಗ್ರಾಪಂ ಉಪಾಧ್ಯಕ್ಷ ನಾಗರಾಜ್‌ ಅವರು, ಹಾರಕನಾಳು ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರದ 14ನೇ ಹಣಕಾಸು ಯೋಜನೆಯ 23ರಿಂದ 24ಲಕ್ಷರೂ. ಕ್ರಿಯಾಯೋಜನೆಗೆ ಅನುಮೋದನೆಗೆ ಕಳಿಸಿದ್ದೇವೆ. ಆದರೆ ಇಲ್ಲಿಯವರಿಗೂ ಬಳ್ಳಾರಿ ಜಿಲ್ಲೆಯ ಸಿಇಓ ನಮಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡದೇ ಚುನಾಯಿತ ಪ್ರತಿನಿಧಿಗಳನ್ನು ಹಾಗೂ ಸಾರ್ವಜನಿಕರನ್ನು ಅನುಮಾನಸ್ಪದವಾಗಿ ನೋಡುತ್ತಾರೆ ಎಂದು ದೂರಿದರು....

ಫೋಟೋ - http://v.duta.us/ED66JAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_RAtIgAA

📲 Get Bellary News on Whatsapp 💬