ಶಿಕ್ಷಕರು ತಾಯಿಗಿಂತಲೂ ಹೆಚ್ಚು

  |   Davanagerenews

ದಾವಣಗೆರೆ: ಮಕ್ಕಳು ಪ್ರವರ್ಧಮಾನಕ್ಕೆ ಬರುವವರೆಗೆ ಶಿಕ್ಷಣ ನೀಡುವಂತಹ ಶಿಕ್ಷಕರು ತಾಯಿಗಿಂತಲೂ ಹೆಚ್ಚು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಬಣ್ಣಿಸಿದ್ದಾರೆ.

ಗುರುವಾರ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಗುರು ತಾಯಿ ಕಲಿಸುವುದಕ್ಕಿಂತಲೂ ಮಕ್ಕಳು ಪ್ರವರ್ಧಮಾನಕ್ಕೆ ಬರುವ ತನಕ ಶಿಕ್ಷಣ ನೀಡುವಂತಹ ಶಿಕ್ಷಕರು ತಾಯಿಗಿಂತಲೂ ಹೆಚ್ಚು ಎಂದರು.

ಉತ್ತಮ ಸಮಾಜ, ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಶಿಕ್ಷಣ ಇಲ್ಲದೆ ಯಾರೂ ಏನೂ ಮಾಡಲಿಕ್ಕೆ ಆಗುವುದೇ ಇಲ್ಲ. ಪ್ರಧಾನಿ, ರಾಷ್ಟ್ರಪತಿ ಯಾರೆಯೇ ಆಗಲಿ, ಗುರುವಿನಿಂದ ಶಿಕ್ಷಣ ಪಡೆಯಲೇ ಬೇಕು. ಹಾಗಾಗಿಯೇ ಇಂದಿನ ಕಾಲದಲ್ಲೂ ಶಿಕ್ಷಕರಿಗೆ ಬಹಳ ಜವಾಬ್ದಾರಿ ಮತ್ತು ಗೌರವ ಇದೆ ಎಂದು ಹೇಳಿದರು.

ಜೀವನದಲ್ಲಿ ಶಿಕ್ಷಣಕ್ಕೆ ಬೆಲೆ ಕಟ್ಟಲಿಕ್ಕೆ ಆಗುವುದೇ ಇಲ್ಲ. ಶಿಕ್ಷಕರು ಸಮಾಜದಲ್ಲಿನ ತಮ್ಮ ಗೌರವ ಮತ್ತು ಜವಾಬ್ದಾರಿಗೆ ತಕ್ಕಂತೆ ಕೆಲಸ ಮಾಡಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ ನೀಡುವುದನ್ನ ಮರೆತಲ್ಲಿ ಶಿಕ್ಷಕರ ದಿನಾಚರಣೆಗೆ ಗೌರವವೇ ಇಲ್ಲದಂತಾಗುತ್ತದೆ ಎಂದರು....

ಫೋಟೋ - http://v.duta.us/BwoCGwEA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KhLrdwAA

📲 Get Davanagere News on Whatsapp 💬