ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗ‌ಲಿ

  |   Haverinews

ಹಾನಗಲ್ಲ: ತಾಯಿಯಂತೆ ಮಮತೆ ತೋರಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನಿಗೆ ಸಮಾಜದಲ್ಲಿ ಗೌರವಗಳು ಸಿಗಬೇಕು ಎಂದು ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ತಾಪಂ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರ ದಿನಾಚರಣೆ ನೆಪಕ್ಕೆ ಮಾತ್ರ ಆಗುವುದು ಬೇಡ. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರಗಳು ಸಿಗುವಂತಾಗಬೇಕು. ಎಲ್ಲವನ್ನೂ ಹೋರಾಟದಿಂದ ಪಡೆಯುವ ಸ್ಥಿತಿ ಇರುವಾಗ ಇದಕ್ಕೆ ಶಿಕ್ಷಕರೂ ಹೊರತಾಗಿಲ್ಲ. ಶಿಕ್ಷಕರ ಶ್ರದ್ಧೆಯ ಸೇವೆ ಸಾರ್ಥಕವಾಗಲು ಸಮಾಜ ಹಾಗೂ ಸರ್ಕಾರ ಶಿಕ್ಷಕರನ್ನು ಗೌರವಿಸಬೇಕು ಎಂದರು.

ಡಾ| ಹೊನ್ನಪ್ಪ ಹೊನ್ನಪ್ಪನವರ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆದರ್ಶಗಳನ್ನು ಶಿಕ್ಷಕರಾದವರು ಎಷ್ಟು ಅಳವಡಿಸಿಕೊಂಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಉತ್ತಮ ವಿದ್ಯಾರ್ಥಿಯಾದರೆ ಮಾತ್ರ ಉತ್ತಮ ಶಿಕ್ಷಕನಾಗಬಲ್ಲ ಎಂಬುದನ್ನು ಅರಿತು, ಈ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಜಿಪಂ ಸದಸ್ಯ ಮಾಲತೇಶ ಸೊಪ್ಪಿನ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ. ಶಾಸಕ ಸಿ.ಎಂ. ಉದಾಸಿ ಅವರನ್ನು ಶಿಕ್ಷಕರ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಶಿಕ್ಷಣ ಸಚಿವರ ಗಮನಸೆಳೆಯಲು ಪ್ರಯತ್ನಿಸಲಾಗುವುದು. ಶಿಕ್ಷಕರು ಕನ್ನಡ ಶಾಲೆಗಳ ಉಳಿವಿಗೆ ಕಾರ್ಯಯೋಜನೆ ರೂಪಿಸಬೇಕು. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದರೂ, ಪಾಲಕರಲ್ಲಿ ಆಂಗ್ಲಮಾಧ್ಯಮ ವ್ಯಾಮೋಹ ತಪ್ಪುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವರೂ ಉನ್ನತ ಹುದ್ದೆಗಳಲ್ಲಿದ್ದಾರೆ ಎಂಬುದನ್ನು ಅರಿತುಕೊಳ್ಳಿ ಎಂದು ಹೇಳಿದರು....

ಫೋಟೋ - http://v.duta.us/zJsVnwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ubw9cgAA

📲 Get Haveri News on Whatsapp 💬