ಸರ್ವಪಲ್ಲಿ ರಾಧಾಕೃಷ್ಣನ್‌ ಆದರ್ಶ ಪಾಲಿಸಿ

  |   Gadagnews

ಗಜೇಂದ್ರಗಡ: ರಾಷ್ಟ್ರ ನಿರ್ಮಾಪಕರಾಗಿರುವ ಶಿಕ್ಷಕ ಸಮೂಹ ಮಕ್ಕಳಲ್ಲಿನ ಪರಿಪೂರ್ಣತೆಯ ಜ್ಞಾನ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಶಿಕ್ಷಣ ಪ್ರೇಮ ಅಮೋಘವಾದದ್ದು ಎಂದು ಓಂ ಸಾಯಿ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಆನಂದ ಮಂತ್ರಿ ಹೇಳಿದರು.

ಪಟ್ಟಣದ ಓಂ ಸಾಯಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ವೇದ, ಉಪನಿಷತ್ತು, ಗೀತೆ, ವಚನಗಳಿಗೆ ಐರೋಪ್ಯ ರಾಷ್ಟ್ರಗಳ ತತ್ವಜ್ಞಾನಿಗಳು ಮರುಳಾಗಿ, ಅವುಗಳ ಜಾಡಿನಲ್ಲಿ, ಗ್ರೀಕ್‌ನ ಪೈಥಾಗೋರಸ್‌, ಸಾಕ್ರೆಟಿಸ್‌, ಪ್ಲೇಟೋ ಮುಂತಾದ ದಾರ್ಶನಿಕ ಚಿಂತಕರು, ಭಾರತೀಯ ಸಂಸ್ಕೃತಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ಮೆಚ್ಚಿಕೊಂಡಿದ್ದಾರೆ. ನಮ್ಮ ಅತ್ಯಂತ ಪ್ರಾಚೀನವಾದ ಭಾರತೀಯ ಸಂಸೃ್ಕತಿಯ ತತ್ವಗಳನ್ನು ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕಿದೆ. ಬಹುತೇಕ ಶಿಕ್ಷಕರು, ವಿದ್ಯಾರ್ಥಿಗಳು ಪರೀಕ್ಷೆಗಾಗಿ ಬದುಕಿ, ಪರೀಕ್ಷೆಗಾಗಿಯೇ ಸಾಯುತ್ತಾರೆ. ಶಿಕ್ಷಕ ಕುದುರೆ ತರಬೇತು ದಾರನಲ್ಲ. ಕುದುರೆ ತರಬೇತುದಾರನಂತೆ ಕೆಲಸ ಮಾಡಿದರೆ ಆತ ಶಿಕ್ಷಕನಾಗುವುದಿಲ್ಲ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉತ್ತಮ ಸ್ನೇಹಿತರಾಗಿರಬೇಕು. ದುರಹಂಕಾರದ, ಅರ್ಥಹೀನ ಮಾತುಗಳನ್ನು ಶಿಕ್ಷಕರು ಬಿಡದಿದ್ದರೆ ವಿದ್ಯಾರ್ಥಿಗಳಲ್ಲಿ ಮನುಷ್ಯತ್ವ ಬೆಳೆಸಲು ಸಾಧ್ಯವಾಗುವುದಿಲ್ಲ ಎಂದರು....

ಫೋಟೋ - http://v.duta.us/itGXFwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/CWBKlQAA

📲 Get Gadag News on Whatsapp 💬