ಅರಮನೆ ಟ್ರಿಣ್‌ಟ್ರಿಣ್‌ ಗುಮ್ಮಟಕ್ಕೂ ದಕ್ಕಲಿ

  |   Bijapur-Karnatakanews

•ಜಿ.ಎಸ್‌. ಕಮತರ

ವಿಜಯಪುರ: ಆಳುವವರಿಗೆ ಗುರಿ ಹಾಗೂ ಅಧಿಕಾರಿಗಳಿಗೆ ಕರ್ತವ್ಯ ಬದ್ದತೆ ಇದ್ದರೆ ಯಾವುದೇ ವ್ಯವಸ್ಥೆಯನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಅಭಿವೃದ್ದಿ ಸಾಧಿಸಬಲ್ಲರು ಎಂಬುದಕ್ಕೆ ಮೈಸೂರು ಜಿಲ್ಲೆ ನಿರ್ದಶನವಾಗಿದೆ. ಪ್ರವಾಸೋದ್ಯಮ ಇನ್ನೂ ಬಲಗೊಳಿಸುವ ಉದ್ದೇಶದಿಂದ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸೈಕ್ಲಿಂಗ್‌ ಸವಾರಿ ಪ್ರವಾಸಿ ಟ್ರಿಣ್‌ ಟ್ರಿಣ್‌ ಯೋಜನೆ ಜಾರಿಗೆ ತಂದಿದೆ. ಇದರಿಂದ ವಾಹನ ದಟ್ಟಣೆ ನಿಯಂತ್ರಣ, ಪರಿಸರ ಸ್ನೇಹಿಯಾಗಿ ಸೈಕ್ಲಿಂಗ್‌ ಬಳಕೆ ಮೂಲಕ ಪ್ರವಾಸಿಗರನ್ನು ವಿಶಿಷ್ಟವಾಗಿ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸೈಕ್ಲಿಂಗ್‌ ತವರು ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಇಂಥ ಕನಿಷ್ಠ ಯೋಚನೆಯೂ ನಡೆಯುತ್ತಿಲ್ಲ.

ಪ್ರವಾಸೋದ್ಯಮದಲ್ಲಿ ಶೂನ್ಯತೆ ಆವರಿಸಿರುವ ವಿಜಯಪುರ ಜಿಲ್ಲೆ ಸೈಕ್ಲಿಂಗ್‌ ಕ್ರೀಡಾ ಕ್ಷೇತ್ರದಲ್ಲಿ ತವರೂರು ಎನಿಸಿಕೊಂಡಿದೆ. ಪ್ರವಾಸೋದ್ಯಮದಲ್ಲಿ ಅದಾಗಲೇ ದೇಶ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಮೈಸೂರು ಪ್ರವಾಸೋದ್ಯಮವನ್ನು ಇನ್ನೂ ಬಲಪಡಿಸಲು ಇದೀಗ ಸೈಕ್ಲಿಂಗ್‌ ಸೇವೆ ಬಳಸಿಕೊಂಡು ಯಶಸ್ವಿಯಾಗಿದೆ. ಸರ್ಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯ ಅಡಳಿತಗಳೂ ಇದಕ್ಕೆ ಕೈ ಜೋಡಿಸಿದ್ದು, ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಸರ ಸ್ನೇಹಿ ಟ್ರಿಣ್‌ ಟ್ರಿಣ್‌ ಎಂಬ ವಿಶಿಷ್ಟ ಯೋಜನೆ ಮೆಚ್ಚುಗೆ ಪಾತ್ರವಾಗಿದೆ....

ಫೋಟೋ - http://v.duta.us/7YeimQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/tAERCAAA

📲 Get Bijapur Karnataka News on Whatsapp 💬