ಆನವಟ್ಟಿಗೆ ಬನವಾಸಿ ಸೇರ್ಪಡೆ: ವಿರೋಧ

  |   Uttara-Kannadanews

ಶಿರಸಿ: ತಾಲೂಕಿನ ಬನವಾಸಿ ವಲಯವನ್ನು ಸೊರಬ ತಾಲೂಕಿನ ಆನವಟ್ಟಿಗೆ ಸೇರಿಸುವ ಸರ್ಕಾರದ ವಿಚಾರವನ್ನು ಇಲ್ಲಿಯ ಜನಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದ್ದು, ಬನವಾಸಿಯನ್ನು ಯಾವುದೇ ರೀತಿಯಿಂದ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಕನ್ನಡ ಪರ ಸಂಘಟನೆ ಕದಂಬ ಸೈನ್ಯ ಆಯೋಜಿಸಿದ್ದ ಸಭೆಯಲ್ಲಿ ಪ್ರತಿಕ್ರಿಯಿಸಿದರು.

ಬನವಾಸಿ ವಲಯ ವ್ಯಾಪ್ತಿಯ ಎಲ್ಲ ಜನಪ್ರತಿನಿಧಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆನವಟ್ಟಿಗೆ ಬನವಾಸಿ ಸೇರ್ಪಡೆ ಮಾಡುವುದನ್ನು ವಿರೋಧಿಸಿದ್ದಾರೆ.

ಬನವಾಸಿಯನ್ನು ಪ್ರತ್ಯೇಕ ತಾಲೂಕಾಗಿ ಮಾಡಿ, ಶಿರಸಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ಠರಾವು ಕೂಡಾ ಸ್ವೀಕರಿಸಲಾಯಿತು.

ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್‌. ನಾಯ್ಕ ಮಾತನಾಡಿ, ಯಾವುದೇ ದೃಷ್ಟಿಯಿಂದ ನೋಡಿದರೂ ಆನವಟ್ಟಿ ಸೇರ್ಪಡೆ ಸಾಧ್ಯವಿಲ್ಲ. ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಗೆ ತನ್ನದೇ ಆದ ಸ್ಥಾನಮಾನವಿದೆ ಎಂದರು.

ಕಾರ್ಯಕ್ರಮ ಸಂಯೋಜನೆ ಮಾಡಿದ ಕದಂಬ ಸೈನ್ಯ ಸಂಘಟನೆ ರಾಜ್ಯ ಸಂಚಾಲಕ ಉದಯಕುಮಾರ ಕಾನಳ್ಳಿ ಮಾತನ್ನಾಡಿ ಉತ್ತರ ಕನ್ನಡದಿಂದ ಬನವಾಸಿ ಬೇರೆಡೆ ಒಯ್ಯಲು ಸಾಧ್ಯವೇ ಇಲ್ಲ. ಇದು ಕೇವಲ ಜಿಲ್ಲೆಯ ಆಸ್ತಿಯಷ್ಟೇ ಅಲ್ಲ, ರಾಜ್ಯದ ಆಸ್ತಿ ಕೂಡಾ. ಈಗಾಗಲೇ ಅನೇಕ ಸಾಹಿತಿಗಳು, ಬರಹಗಾರರು, ಚಿಂತಕರು ಕೂಡಾ ಬನವಾಸಿ ಆನವಟ್ಟಿ ಸೇರ್ಪಡೆ ವಿಚಾರ ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಹೇಳಿದ ಅವರು, ಬನವಾಸಿ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ಹೋರಾಟದ ಕಿಚ್ಚು ಹೆಚ್ಚಾಗಿದೆ ಎಂದಿದ್ದಾರೆ....

ಫೋಟೋ - http://v.duta.us/YbhqrAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/U8S_UQAA

📲 Get Uttara Kannada News on Whatsapp 💬