ಕೇಂದ್ರ ಸರ್ಕಾರ ವಿಐಎಸ್‌ಎಲ್ ಉಳಿವಿಗೆ ಯತ್ನಿಸಲಿ

  |   Shimoganews

ಭದ್ರಾವತಿ: ಕೇಂದ್ರ ಸರ್ಕಾರ ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಅವಕಾಶಕ್ಕೆ ಇನ್ನೂ ಕಾಲ ಮಿಂಚಿಲ್ಲ ಎಂದು ಭಾರತೀಯ ಮಜ್ದೂರ್‌ ಸಂಘದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಂದ್ರನ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಖಾನೆಯ ಒಳಗೆ ನಮ್ಮ ಸಂಘದ ವತಿಯಿಂದ ಭೇಟಿ ನೀಡಿ ಪರಿಶೀಲಿಸಿದ್ದು, ಪಶ್ಚಿಮ ಬಂಗಾಳದ ದುರ್ಗಾಪುರ್‌, ತಮಿಳುನಾಡಿನ ಸೇಲಂ ಪ್ಲಾಂಟ್‌ಗಳಿಗೆ ಹೋಲಿಸಿದರೆ ಈ ಕಾರ್ಖಾನೆಯ ಸ್ಥಿತಿ ಉತ್ತಮವಾಗಿಯೇ ಇದೆ. ಆದರೆ ಸೂಕ್ತ ಸಮಯದಲ್ಲಿ ಕೇಂದ್ರ ಉಕ್ಕು ಪ್ರಾಧಿಕಾರ ಇದರ ಉಳಿವು, ಬೆಳವಣಿಗೆಗೆ ಕೊಡಬೇಕಾದಷ್ಟು ಗಮನ ಹರಿಸದಿದ್ದ ಕಾರಣ ಈ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಕಾರ್ಮಿಕರಿಗೆ ಕಾರ್ಖಾನೆಯ ಬಗ್ಗೆ ಭಾವನಾತ್ಮಕವಾದ ಸಂಬಂಧವಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಕಾರ್ಖಾನೆಯ ಉಳಿವಿಗೆ ಇಲ್ಲಿನ ಕಾರ್ಮಿಕ ಸಂಘ ನಡೆಸುತ್ತಿರುವ ಹೋರಾಟಕ್ಕೆ ಭಾರತೀಯ ಮಜ್ದೂರ್‌ ಸಂಘ ಬೆಂಬಲಿಸುತ್ತದೆ. ಜೊತೆಗೆ ಈ ಕಾರ್ಖಾನೆಯ ಪರಿಸ್ಥಿತಿ ಹಾಗೂ ಇದರ ಅಭಿವೃದ್ಧಿಯ ಬಗ್ಗೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಮ್ಮ ಸಂಘ ರೂಪುರೇಷೆಗಳನ್ನು ತಯಾರಿಸಿ ಆ ಕುರಿತು ಕೇಂದ್ರ ಸರ್ಕಾರದ ಉಕ್ಕು ಮಂತ್ರಿಗಳೊಂದಿಗೆ ಶನಿವಾರ ದೆಹಲಿಯಲ್ಲಿ ಮಾತನಾಡಿ ಮನವಿ ಸಲ್ಲಿಸಲಿದ್ದೇವೆ. ನಮಗೆ ಸರ್ಕಾರ ಮುಖ್ಯವಲ್ಲ, ಕಾರ್ಮಿಕರ ಹಿತ ಕಾಯುವುದೇ ಮುಖ್ಯ. ಅದ್ದರಿಂದ ನಾವು ಪಶ್ಚಿಮ ಬಂಗಾಳದ ದುರ್ಗಾಪುರ್‌ ಪ್ಲಾಂಟ್, ತಮಿಳುನಾಡಿನ ಸೇಲಂ ಪ್ಲಾಂಟ್, ಕರ್ನಾಟಕದ ವಿಐಎಸ್‌ಎಲ್ ಪ್ಲಾಂಟ್ ಉಳಿಸಲು ಆಯಾ ರಾಜ್ಯಗಳಲ್ಲಿರುವ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದರು....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/_xTujgEA

📲 Get Shimoga News on Whatsapp 💬