ಕಾಪು ತಾ| ವಿವಿಧ ಸಮಸ್ಯೆಗಳ ಅಹವಾಲು ಮಂಡಿಸಿದ ಜನಪ್ರತಿನಿಧಿಗಳು !

  |   Udupinews

ಕಾಪು: ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ ನೆಲೆಯಲ್ಲಿ ನಾವು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ. ಅದರ ಅನುಷ್ಠಾನಕ್ಕೆ ಎಲ್ಲಾ ಹಂತದ ಅಧಿಕಾರಿಗಳ ಸಹಕಾರದ ಅಗತ್ಯತೆಯಿದೆ. ಇದಕ್ಕಾಗಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುವ ಅಗತ್ಯತೆಯಿದೆ. ಕ್ಷೇತ್ರದ ಜನತೆಯನ್ನು ಜ್ವಲಂತವಾಗಿ ಕಾಡುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

ಕಾಪು ಪುರಸಭಾ ಸಭಾಂಗಣದಲ್ಲಿ

ಸೆ. 4ರಂದು ನಡೆದ ಜಿಲ್ಲಾಧಿಕಾರಿಗಳ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.

ಯುಪಿಸಿಎಲ್‌, ಐಎಸ್‌ಪಿಆರ್‌ಎಲ್‌, ಸುಜ್ಲಾನ್‌ನಂತಹ ಸಾವಿರಾರು ಕೋಟಿ ರೂಪಾಯಿ ಬಂಡವಾಳ ದ ಯೋಜನೆಗಳು ಕಾಪು ಕ್ಷೇತ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ ಅದರಿಂದ ಕ್ಷೇತ್ರದ ಬೆಳವಣಿಗೆಗೆ ನಿರೀಕ್ಷಿತ ಸಹಕಾರ ದೊರಕಿಲ್ಲ. ಕಾಪು ಮೆಸ್ಕಾಂ ಕಚೇರಿಗೆ ಕಟ್ಟಡ ನಿರ್ಮಾಣಕ್ಕೆ ಪ್ರವಾಸಿ ಬಂಗ್ಲೆ ಪ್ರದೇಶದಲ್ಲಿನ 19 ಸೆಂಟ್ಸ್‌ ಜಮೀನನ್ನು ಗುರುತಿಸಲಾಗಿದೆ. ಮಿನಿ ವಿಧಾನಸೌಧ ಸಹಿತ ವಿವಿಧ ಕಚೇರಿಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ಬಂಗ್ಲೆ ಪ್ರದೇಶದಲ್ಲಿರುವ ವಸತಿ ಗƒಹ ಕಟ್ಟಡಗಳನ್ನು ತೆರವು ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಅವರು ಮನವಿ ಮಾಡಿದರು....

ಫೋಟೋ - http://v.duta.us/nhfQawAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/wNlEUAAA

📲 Get Udupi News on Whatsapp 💬