ಕವಿತಾಳ ಪಟ್ಟಣ ಅಭಿವೃದ್ಧಿಗೆ ನಿರ್ಲಕ್ಷ್ಯ

  |   Raichurnews

ಶೇಖರಪ್ಪ ಕೋಟಿ

ಕವಿತಾಳ: ಕವಿತಾಳ ಪಟ್ಟಣ ಪಂಚಾಯಿತಿಗೆ ಮೂರು ವರ್ಷಗಳಲ್ಲಿ ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಹರಿದು ಬಂದರೂ ಸಮರ್ಪಕ ಬಳಕೆ ಆಗದ್ದರಿಂದ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಪಟ್ಟಣದಲ್ಲಿ ಸುಸಜ್ಜಿತ ರಸ್ತೆ, ಬೀದಿ ದೀಪ ಇತರೆ ಸೌಲಭ್ಯಗಳು ಮರೀಚಿಕೆಯಾಗಿವೆ.

ಗ್ರಾಪಂನಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಕವಿತಾಳ ಪಟ್ಟಣ ಸಮಗ್ರ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ. ಹಂಚಿಕೆಯಾಗಿದೆ. ಟೆಂಡರ್‌ ಕರೆದು ಕಾಮಗಾರಿಗೆ ಚಾಲನೆ ನೀಡಿದ್ದು ಬಿಟ್ಟರೆ ಇದುವರೆಗೆ ಅನುಷ್ಠಾನಗೊಂಡಿದ್ದು ಕೆಲವೇ ಕೆಲವು ಕಾಮಗಾರಿ ಮಾತ್ರ.

ಎಸ್‌ಎಫ್‌ಸಿ ಅರೆಬರೆ: ಪಟ್ಟಣದ 16 ವಾರ್ಡ್‌ಗಳಲ್ಲಿ ಸಿಸಿ ರಸ್ತೆಗಾಗಿ ಎಸ್‌ಎಫ್‌ಸಿ ಅನುದಾನದಲ್ಲಿ 29 ಲಕ್ಷ ರೂ. ಬಿಡುಗಡೆಯಾಗಿದೆ. 2018ರಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಇದುವರೆಗೂ ಯಾವ ಕಾಮಗಾರಿಯೂ ಪೂರ್ಣಗೊಂಡಿಲ್ಲ. 3ನೇ ವಾರ್ಡ್‌ನಲ್ಲಿ ಇದುವರೆಗೆ ಕಾಮಗಾರಿಯೇ ಆರಂಭಿಸಿಲ್ಲ. ಉಳಿದ ವಾರ್ಡ್‌ಗಳಲ್ಲಿಯೂ ಅರೆ-ಬರೆ ಕೆಲಸ ಮಾಡಲಾಗಿದೆ. ಕೆಲವು ಕಡೆ ಮೆಟಲಿಂಗ್‌ ಮಾಡಿ ಕೈಬಿಡಲಾಗಿದೆ. ಇನ್ನು ಕೆಲವು ಕಡೆ ರಸ್ತೆ ಅಗೆದು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಕಾಮಗಾರಿ ಮುಗಿಯುವ ಮುನ್ನವೇ ಈಗ ಮತ್ತೆ 2019-20ನೇ ಸಾಲಿನ ಎಸ್‌ಎಫ್‌ಸಿ, 14ನೇ ಹಣಕಾಸಿನ ನಿಧಿಯಡಿ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ....

ಫೋಟೋ - http://v.duta.us/aUHt4AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/S1__ngAA

📲 Get Raichur News on Whatsapp 💬