ಕ್ಷಯ ರೋಗ ಉನ್ನತ ಪರೀಕ್ಷಾ ಕೇಂದ್ರಕ್ಕಿಲ್ಲ ಬಿಡುವು

  |   Raichurnews

ರಾಯಚೂರು: ವಿವಿಧ ಸೇವೆಗಳ ಅಸಮರ್ಪಕ ಅನುಷ್ಠಾನದಿಂದ ಟೀಕೆಗೊಳಗಾಗುವ ರಿಮ್ಸ್‌ನಲ್ಲಿ ಕ್ಷಯರೋಗ ಔಷಧ ಸಂವೇದನಾಶೀಲತೆ ಪರೀಕ್ಷಾ ಕೇಂದ್ರ ಮಾತ್ರ ಬಿಡುವಿಲ್ಲದೇ ಕೆಲಸ ಮಾಡುತ್ತಿರುವುದು ವಿಶೇಷ.

ಎಂಟು ಜಿಲ್ಲೆಗಳು ಒಳಗೊಂಡು ಇರುವ ಏಕೈಕ ಪರೀಕ್ಷಾ ಕೇಂದ್ರ ಇದಾಗಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗಿದೆ.

ಜಿಲ್ಲಾವಾರು ಇರುವ ಕ್ಷಯ ರೋಗ ಕೇಂದ್ರಗಳಲ್ಲಿ ಕಾಯಿಲೆ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ಆದರೆ, ಕಾಯಿಲೆ ಯಾವ ಹಂತದಲ್ಲಿದೆ. ಏನು ಚಿಕಿತ್ಸೆ ನೀಡಬೇಕು ಎಂಬಿತ್ಯಾದಿ ವಿವರಗಳು ಸಿಗುವುದಿಲ್ಲ. ಆ ಮಾಹಿತಿಯನ್ನು ಇಲ್ಲಿರುವ ಕ್ಷಯರೋಗ ಔಷಧ ಸಂವೇದನಾಶೀಲತೆ ಪರೀಕ್ಷಾ ಕೇಂದ್ರದಿಂದ ಪಡೆಯಬಹುದು. ಇದು ರೋಗದ ಉನ್ನತ ಮಟ್ಟದ ಪರೀಕ್ಷೆ ಕೇಂದ್ರವಾಗಿದೆ. 2018ರಲ್ಲಿ 9,200 ಕ್ಷಯ ರೋಗ ಮಾದರಿಗಳ ತಪಾಸಣೆ ಮಾಡಿದ್ದರೆ, ಈ ವರ್ಷ ಈವರೆಗೆ ಬರೋಬ್ಬರಿ 9 ಸಾವಿರ ಮಾದರಿ ಪರೀಕ್ಷೆ ಮಾಡಲಾಗಿದೆ. ಇನ್ನೂ ಮೂರು ತಿಂಗಳಲ್ಲಿ ಈ ಪ್ರಮಾಣ ಹೆಚ್ಚಾಗಲಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಅತ್ಯಾಧುನಿಕ ಯಂತ್ರೋಪಕರಣ ಇರುವ ಪರೀಕ್ಷಾ ಕೇಂದ್ರವಾಗಿದ್ದು, ಕೇಂದ್ರ ಸರ್ಕಾರದಿಂದ ಪ್ರಮಾಣಿತಗೊಂಡಿದೆ. ಬೆಂಗಳೂರು, ಹುಬ್ಬಳ್ಳಿ ಬಿಟ್ಟರೆ ರಾಯಚೂರಿನಲ್ಲಿ ಈ ಕೇಂದ್ರ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ. ಹೈ-ಕ ಭಾಗದ ಆರು ಜಿಲ್ಲೆಗಳು ಮಾತ್ರವಲ್ಲದೇ ಚಿತ್ರದುರ್ಗ, ವಿಜಯಪುರ ಕೂಡ ಇದರ ವ್ಯಾಪ್ತಿಗೆ ಒಳಪಡುತ್ತಿದೆ. ದೇಶದಲ್ಲಿ ಇಂತಹ ಅತ್ಯಾಧುನಿಕ ಸೌಲಭ್ಯಗಳುಳ್ಳ ಪರೀಕ್ಷಾ ಕೇಂದ್ರಗಳು 67 ನಗರದಲ್ಲಿ ಮಾತ್ರ ಲಭ್ಯವಿದೆ. ಅಮೆರಿಕ ತಂತ್ರಜ್ಞಾನ ಬಳಸಿ ವಿದೇಶದಿಂದ ಯಂತ್ರೋಪಕರಣಗಳನ್ನು ತರಿಸಿಕೊಂಡು ನುರಿತ ತಂತ್ರಜ್ಞರ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.

ಫೋಟೋ - http://v.duta.us/A2V2KwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KRR_UgAA

📲 Get Raichur News on Whatsapp 💬