ಗಂಗೊಳ್ಳಿ: ಕುಸಿದು ವರ್ಷವಾದರೂ ದುರಸ್ತಿಯಾಗದ ಜೆಟ್ಟಿ

  |   Udupinews

ಗಂಗೊಳ್ಳಿ: ಇಲ್ಲಿನ ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕುಸಿದಿದ್ದು, ಅಂದರೆ ಈ ವರ್ಷಕ್ಕೆ ಒಂದು ವರ್ಷವಾಗುತ್ತದೆ. ದುರಸ್ತಿಗೆ ರಾಜ್ಯ ಸರಕಾರದಿಂದ ಅನುದಾನ ಮಂಜೂರಾಗಿದ್ದರೂ, ಇನ್ನೂ ಟೆಂಡರ್‌ ಪ್ರಕ್ರಿಯೇ ಆರಂಭವಾಗಿಲ್ಲ. ಈಗಾಗಲೇ ಮೀನುಗಾರಿಕಾ ಋತು ಆರಂಭವಾಗಿದ್ದು, ಬಂದರಿನಲ್ಲಿ ಬೋಟು ಗಳಿಂದ ಮೀನು ಇಳಿಸಲು, ಬೋಟು ನಿಲುಗಡೆಗೆ ಜಾಗದ ಸಮಸ್ಯೆಯಾಗುತ್ತಿದೆ.

ಮೀನುಗಾರರಿಗೆ ಸಮಸ್ಯೆ

2018ರ ಸೆ. 14 ರಂದು ಮೀನುಗಾರಿಕಾ ಬಂದರಿನ ಎರಡನೇ ಹರಾಜು ಪ್ರಾಂಗಣದ ಜೆಟ್ಟಿಯ ಸ್ಲ್ಯಾಬ್ ಕುಸಿದು ಬಿದ್ದಿತ್ತು. ಆ ಬಳಿಕ ಡಿಸೆಂಬರ್‌ನಲ್ಲಿ ಮತ್ತೂಂದು ಕಡೆ ಕೂಡ ಸ್ಲ್ಯಾಬ್ ಕುಸಿದಿತ್ತು. ಅನಂತರ ಈ ಎರಡನೇ ಹರಾಜು ಪ್ರಾಂಗಣದಲ್ಲಿ ಮೀನುಗಾರರಿಗೆ ಅಪಾಯ ಎದುರಾಗಬಹುದು ಎನ್ನುವ ಕಾರಣಕ್ಕೆ ಇಲ್ಲಿ ಎಲ್ಲ ರೀತಿಯ ಮೀನುಗಾರಿಕಾ ಚಟುವಟಿಕೆಗಳಿಗೆ ಅವಕಾಶ ನೀಡಿರಲಿಲ್ಲ. ಇದರಿಂದ ಮೀನುಗಾರರಿಗೆ ಸಮಸ್ಯೆಯಾಗುತ್ತಿದೆ.

ಮತ್ತಷ್ಟು ಕುಸಿಯುವ ಭೀತಿ

ಜೆಟ್ಟಿ ಒಟ್ಟು ಅಂದಾಜು 400 ಮೀ. ಉದ್ದವಿದ್ದು, ಅದರಲ್ಲಿ 100 ಮೀ. ಉದ್ದದ ಜೆಟ್ಟಿ ಈವರೆಗೆ ಕುಸಿದಿದೆ. ಇನ್ನು ಸಮುದ್ರದ ನೀರು ಒಳಗೆ ನುಗ್ಗುತ್ತಿರುವುದರಿಂದ ಜೆಟ್ಟಿಯ ಅಡಿಪಾಯಕ್ಕೆ ಕುತ್ತು ತರುವ ಭೀತಿಯೂ ಎದುರಾಗಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಹರಾಜು ಪ್ರಾಂಗಣದ ಗೋಡೆ, ಜೆಟ್ಟಿ ಎಲ್ಲವೂ ಕುಸಿಯುವ ಸಂಭವ ಇದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ....

ಫೋಟೋ - http://v.duta.us/vIzrAwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/nSZlvQAA

📲 Get Udupi News on Whatsapp 💬