ಚಂದ್ರಯಾನ-2ಗೆ ರಸ್ತೆಗಳೂ ಲಕ ಲಕ!

  |   Bangalore-Citynews

ಬೆಂಗಳೂರು: ವಾರದ ಹಿಂದೆ ಅಲ್ಲಿನ ರಸ್ತೆಯುದ್ದಕ್ಕೂ ಗುಂಡಿಗಳು, ಪೈಪ್‌ಲೈನ್‌ಗಳು ಬಿದ್ದಿದ್ದವು. ಎತ್ತರಿಸಿದ ಮಾರ್ಗದಲ್ಲಿ ಮಳೆ ಬಿದ್ದರೆ, ಅದರಲ್ಲಿನ ಪೈಪ್‌ನಿಂದ ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಆ ಮಳೆನೀರಿನ ಸ್ನಾನ ಆಗುತ್ತಿತ್ತು. ಆದರೆ ಶುಕ್ರವಾರ ರಸ್ತೆಯ ಚಿತ್ರಣವೇ ಬದಲಾಗಿದ್ದು, ಹುಡುಕಿದರೂ ಗುಂಡಿಗಳ ಗುರುತು ಸಿಗುತ್ತಿರಲಿಲ್ಲ. ಇದೆಲ್ಲವೂ ಚಂದ್ರಯಾನ-2 ಎಫೆಕ್ಟ್!

ಬಾಹ್ಯಾಕಾಶದಲ್ಲಿ ಚಂದ್ರನ ಸುತ್ತ ತಿರುಗುತ್ತಿರುವ “ಚಂದ್ರಯಾನ-2’ಕ್ಕೂ ನಗರದ ಪೀಣ್ಯ ರಸ್ತೆಗೂ ಯಾವ ಸಂಬಂಧ? ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ನೀವು ಕೇಳಬಹುದು. ಆದರೆ, ಸ್ವಾರಸ್ಯ ಇರುವುದು ಇಲ್ಲಿಯೇ. ಮಹತ್ವಾಕಾಂಕ್ಷಿ ಈ ಉಪಗ್ರಹದ ಹಗುರ ಚಂದ್ರನ ಸ್ಪರ್ಶಕ್ಕೆ ಸಾಕ್ಷಿಯಾಗಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಬರುವ ಪ್ರಧಾನಿ, ಇದೇ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಇಸ್ರೋ ಟೆಲಿಮೆಟ್ರಿಕ್‌ ಟ್ರ್ಯಾಕಿಂಗ್‌ ಆಂಡ್‌ ಕಮಾಂಡ್‌ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರಕ್ಕೆ ರಸ್ತೆ ಮೂಲಕ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ರಸ್ತೆ ದುರಸ್ತಿ ಕಾರ್ಯ ನಡೆಸಲಾಗಿತ್ತು.

ಗೊರಗುಂಟೆಪಾಳ್ಯದಿಂದ ಜಾಲಹಳ್ಳಿ ಕ್ರಾಸ್‌ನ ಎಡಕ್ಕೆ ತಿರುಗುತ್ತಿದ್ದಂತೆ ಜಲ ಮಂಡಳಿ ರಸ್ತೆ ಕೊರೆದಿತ್ತು. ಇದರಿಂದ ಅಲ್ಲಿ ಸುಗಮ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಿತ್ತು. ಈ ಬಗ್ಗೆ ಅಧಿಕಾರಿಗಳು ತಿರುಗಿ ಕೂಡ ನೋಡಿರಲಿಲ್ಲ. ಗುರುವಾರ ಆ ರಸ್ತೆ ಸಂಪೂರ್ಣ ದುರಸ್ತಿಯಾಗಿದೆ. ಅದೇ ರೀತಿ, ಎತ್ತರಿಸಿದ ಮಾರ್ಗದಿಂದ ಮಳೆ ನೀರು ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಸುರಿಯುತ್ತಿತ್ತು. ಅದನ್ನೂ ಶುಕ್ರವಾರ ದುರಸ್ತಿ ಮಾಡಿದ್ದಾರೆ. ಇಸ್ರೋದ ಚಂದ್ರಯಾನ-2 ಕಾರ್ಯಕ್ರಮಕ್ಕೆ ಹಾಗೂ ಇದನ್ನು ವೀಕ್ಷಿಸಲು ಆಗಮಿಸುತ್ತಿರುವ ಪ್ರಧಾನಿಗೆ ಅಭಿನಂದನೆಗಳು ಎಂದು ಸ್ಥಳೀಯ ನಿವಾಸಿ ಮಂಜುನಾಥ್‌ ಹೇಳಿದರು....

ಫೋಟೋ - http://v.duta.us/xYoesgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Z_7f6AAA

📲 Get Bangalore City News on Whatsapp 💬