ಜೋರು ಸದ್ದು ಮಾಡುತ್ತಿರುವ ಮೋದಿ ಫ್ಲೆಕ್ಸ್‌

  |   Dharwadnews

ಹುಬ್ಬಳ್ಳಿ: ರಾಜ್ಯದಲ್ಲಿ ಜನ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಪ್ರಧಾನಿ ನೆರೆಹಾವಳಿ ಪ್ರದೇಶಕ್ಕೆ ಭೇಟಿ ಕೊಟ್ಟು ನಿರಾಶ್ರಿತರ ಸಮಸ್ಯೆ ಆಲಿಸಿ, ಪರಿಹಾರ ನೀಡಿ ಎಂದು ಕೇಳುವುದು ತಪ್ಪಾ? ಇದನ್ನು ಪ್ರಶ್ನಿಸಿದವರ ಮೇಲೆ ದೂರು ದಾಖಲಿಸುವುದು ಯಾವ ನ್ಯಾಯವೆಂದು ಕಾಂಗ್ರೆಸ್‌ ಹು-ಧಾ ಮಹಾನಗರ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2009ರಲ್ಲಿ ಆಗಿದ್ದ ನೆರೆ ಹಾವಳಿಗಿಂತ 8-10 ಪಟ್ಟು ಹೆಚ್ಚು ಈ ವರ್ಷ ಪ್ರವಾಹ ಬಂದಿದೆ. ಜನರು ಮನೆ-ಮಠ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿ ತೀವ್ರ ಸಮಸ್ಯೆಗೊಳಗಾಗಿದ್ದಾರೆ. ಆದರೆ ಕೇಂದ್ರ ಸರಕಾರ ಇದುವರೆಗೂ ಪರಿಹಾರಧನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಹಾನಿಯಾದರು, ಜನರು ತೊಂದರೆ ಅನುಭವಿಸುತ್ತಿದ್ದರು ಪ್ರಧಾನಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಈಗ ಚಂದ್ರಯಾನ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅವರ ಈ ಧೋರಣೆ ಬಗ್ಗೆ ಪ್ರಶ್ನಿಸುವುದು ತಪ್ಪೇ? ಅವರ ತಪ್ಪುಗಳನ್ನು ವಿರೋಧಿಸುವ ಹಾಗೂ ಧ್ವನಿ ಎತ್ತಿದವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಆ ಮೂಲಕ ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನಾದರು ಅವರು ಪ್ರಜಾಪ್ರಭುತ್ವ ಉಳಿಸಲಿ ಎಂದರು....

ಫೋಟೋ - http://v.duta.us/ghg4IAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gKfSgQAA

📲 Get Dharwad News on Whatsapp 💬