ತುಂಬಿದ ಭದ್ರೆಗೆ ಸಂಸದೆ ಶೋಭಾ ಬಾಗಿನ

  |   Chikkamagalurunews

ತರೀಕೆರೆ: ನೀರಿಲ್ಲದೆ ಮಾನವನ ಬದುಕೇ ಇಲ್ಲ. ಕೆಲವಡೆ ಅತಿವೃಷ್ಟಿ ಮತ್ತೆ ಕೆಲವೆಡೆ ಅನಾವೃಷ್ಟಿ ಕಾಡುತ್ತಿದೆ. ನೀರಿನ ಸದ್ಬಳಕೆ ಮಾಡಬೇಕು. ನೀರನ್ನು ಪೋಲು ಮಾಡಬಾರದು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಭದ್ರಾ ನದಿಗೆ ಗಂಗಾ ಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಕೃತಿ ವೈಪರೀತ್ಯದಿಂದಾಗಿ ಅನಾಹುತಗಳು ಸಂಭವಿಸಿವೆ. ಪ್ರಕೃತಿ ಮೇಲೆ ಮಾನವನಿಂದಾಗಿರುವ ತಪ್ಪುಗಳೇ ಇದಕ್ಕೆ ಕಾರಣ. ಪ್ರಕೃತಿ ನಮ್ಮ ನಿಯಂತ್ರಣದಲ್ಲಿಲ್ಲ. ಪ್ರಕೃತಿಯ ಮೇಲೆ ನಾವು ಅವಲಂಬಿತರಾಗಿದ್ದೇವೆ ಎನ್ನುವುದನ್ನು ಅರಿಯಬೇಕಾಗಿದೆ. ಪರಿಸರ ನಾಶದಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ. ಪರಿಸರ ಕಾಪಾಡಿಕೊಂಡಲ್ಲಿ ಅದು ನಮ್ಮನ್ನು ಕಾಪಾಡುತ್ತದೆ. ಅರಣ್ಯ ಪ್ರದೇಶ ನಾಶವಾಗುತ್ತಿರುವುದಕ್ಕೆ ನಾವೇ ಕಾರಣ ಎಂದರು.

ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ನದಿ ಪಾತ್ರದ ಗ್ರಾಮಗಳು, ನಗರಗಳು ನಲುಗಿಹೋಗಿವೆ. ಮಲೆನಾಡಿನಲ್ಲೂ ಪ್ರಕೃತಿ ಆರ್ಭಟ ಜೋರಾಗಿದೆ. ಇದರಿಂದಾಗಿ ಸಾವು- ನೋವುಗಳು ಉಂಟಾಗಿವೆ. ಇದಕ್ಕೆ ನಾವು ಕಾರಣಗಳನ್ನೂ ಹುಡಬೇಕಾಗಿದೆ ಎಂದರು.

ಕೇಂದ್ರ ಸರಕಾರ ನದಿಗಳಲ್ಲಿ ಉಂಟಾಗುವ ಪ್ರವಾಹವನ್ನು ತಡೆಗಟ್ಟಲು ನದಿ ಜೋಡಣೆ ಬಗ್ಗೆ ಚರ್ಚೆ ನಡೆಸಿದೆ. ಮಳೆ ಪ್ರಮಾಣ ಹೆಚ್ಚಾದಾಗ ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸ ಮಾಡಬೇಕಾಗಿದೆ. ಹಲವಾರು ಸರಕಾರಗಳು ಬಂದರು ಇದರ ಕಡೆ ಗಮನ ಹರಿಸಿಲ್ಲ. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿದಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಬಚಾವತ್‌ ಆಯೋಗ ರಾಜ್ಯಕ್ಕೆ 179 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಆದರೆ, ದುರಾದೃಷ್ಟವಶಾತ್‌ ನಾವು ಒಂದೇ ಒಂದು ಟಿಎಂಸಿ ನೀರನ್ನೂ ಬಳಕೆ ಮಾಡಿಕೊಂಡಿಲ್ಲ. ಮಳೆ ನೀರನ್ನು ಕೆರೆಗಳಿಗೆ ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡಬೇಕಾಗಿದೆ. ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ಜಾರಿಗೆ ತರಬೇಕಾಗಿದೆ ಎಂದು ತಿಳಿಸಿದರು....

ಫೋಟೋ - http://v.duta.us/wlF-VQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/LubOnAAA

📲 Get Chikkamagaluru News on Whatsapp 💬