ದಸರಾ ಆನೆಗಳ ಭಾರ ಹೊರುವ ತಾಲೀಮು ಆರಂಭ

  |   Karnatakanews

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಸರಾ ಆನೆಗಳ ಭಾರ ಹೊರುವ ತಾಲೀಮು ನಡೆಯಿತು. ಮೊದಲ ದಿನ ಅಂಬಾರಿ ಆನೆ ಅರ್ಜುನ 350 ಕೆ.ಜಿ.ಭಾರದ ಮರಳಿನ ಮೂಟೆ ಹೊರುವ ಮೂಲಕ ತಾಲೀಮು ನಡೆಸಿದ್ದು, ಅರ್ಜುನನ ಜೊತೆಗೆ ವಿಜಯ, ಅಭಿಮನ್ಯು, ವರಲಕ್ಷ್ಮೀ, ಧನಂಜಯ, ಈಶ್ವರ ಆನೆಗಳು ತಾಲೀಮು ನಡೆಸಿದವು.

ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ನಿವಾಸದ ಮುಂದೆ ಅಳವ ಡಿಸ ಲಾ ಗಿ ರುವ ಕ್ರೇನ್‌ ಮೂಲಕ ಅರ್ಜುನನ ಮೇಲೆ ಮರಳು ಮೂಟೆಯನ್ನು ಇಡಲಾಯಿತು. ಬೆಳಗ್ಗೆ 8ರ ವೇಳೆಗೆ ಅರಮನೆಯ ಆವರಣವನ್ನು ಬಿಟ್ಟ ಈ ಆನೆ ತಂಡ, ಸಯ್ನಾಜಿರಾವ್‌ ರಸ್ತೆ ಮೂಲಕ ಹೈವೇ ವೃತ್ತ, ಬನ್ನಿಮಂಟಪವನ್ನು 9.30ಕ್ಕೆ ತಲುಪಿತು. ಕೆಲಕಾಲ ಅಲ್ಲೇ ವಿಶ್ರಾಂತಿ ಪಡೆದು, ಪುನ: ಬೆ.11.30ರ ವೇಳೆಗೆ ಅರಮನೆ ಪ್ರವೇಶಿಸಿದವು.

ಅಂಬಾರಿ ಅಂದಾಜು 750 ಕೆ.ಜಿ.ತೂಕ ಇದೆ. ಅಷ್ಟು ಭಾರವನ್ನು ಹೊರುವುದಕ್ಕೆ ಆನೆಯನ್ನು ತಯಾರು ಮಾಡಬೇಕಿದೆ. ಹೈಕೋರ್ಟ್‌ ನಿರ್ದೇಶನದ ಪ್ರಕಾರ 60 ವರ್ಷ ತುಂಬಿದ ಆನೆಗೆ ಭಾರ ಹೊರಿಸುವಂತೆ ಇಲ್ಲ. ಈಗ ಅರ್ಜುನನಿಗೆ 59 ವರ್ಷ ಆಗಿದೆ. ಹೀಗಾಗಿ, ಮುಂದಿನ ವರ್ಷ ಅರ್ಜುನನ ಬದಲು ಮತ್ತೂಂದು ಆನೆ ಭಾರ ಹೊರಲಿದೆ ಎಂದು ಡಿಜಿಸಿಎಫ್ ಅಲೆಕ್ಸಾಂಡರ್‌ ತಿಳಿಸಿದರು.

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/u2i78AAA

📲 Get Karnatakanews on Whatsapp 💬