ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

  |   Bijapur-Karnatakanews

ಇಂಡಿ: ದೈಹಿಕ, ಶಾರೀರಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಉತ್ತಮ ಆರೋಗ್ಯ ವೃದ್ಧಿಯಾಗಬೇಕಾದರೆ ಶಿಕ್ಷಣದ ಜೊತೆಯಲ್ಲಿ ದೈಹಿಕ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಶುಕ್ರವಾರ ಪಟ್ಟಣದ ಅಂಜುಮನ್‌ ಕಾಲೇಜು ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಪಪೂ ಕಾಲೇಜುಗಳ ಗುಂಪು ಮತ್ತು ವೈಯಕ್ತಿಕ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದ‌ರು.

ಶಿಕ್ಷಣ ವ್ಯವಸ್ಥೆ ನಿಂತ ನೀರಲ್ಲ. ಅದು ಸದಾ ಪ್ರಹವಿಸುವಂತೆ ಶಾಲಾ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಅಂಜುಮನ್‌ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ರಂಗಗಳಲ್ಲಿ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆ ಸ್ಥಾನ ಅಲಂಕರಿಸಿದ್ದು ಹೆಮ್ಮೆ ಸಂಗತಿ ಎಂದರು.

ಒಂದು ದೇಶದ ಪ್ರಗತಿ ಅಲ್ಲಿನ ಜನರ ಆರೋಗ್ಯ ಮಟ್ಟ ಸಹಿತ ಒಳಗೊಂಡಿರುತ್ತದೆ. ನಮ್ಮ ಪೂರ್ವಜರ ಗಟ್ಟಿತನ ಹಾಗೂ ಆಯುಷ್ಯಕ್ಕೆ ಅವರು ಸೇವಿಸುತ್ತಿದ್ದ ಆಹಾರ ಪಧಾರ್ಥಗಳೇ ಕಾರಣ. ಅಂದು ಜೈವಿಕ ಆಹಾರ ಸೇವಿಸಿ ದೈಹಿಕ ಕಸರತ್ತು ಮಾಡುವ ಮೂಲಕ ಶರೀರ ಗಟ್ಟಿಗೊಳಿಸುತ್ತಿದ್ದರು. ಇಂದು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ರಾಸಾಯನಿಕ ಸಿಂಪಡಿಸಿದ ಆಹಾರಗಳನ್ನು ಸೇವಿಸಿ ದೈಹಿಕತೆ ಖನ್ನವಾಗುತ್ತಿದೆ ಎಂದರು....

ಫೋಟೋ - http://v.duta.us/ANkq_gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gzq4kwAA

📲 Get Bijapur Karnataka News on Whatsapp 💬