ನಗರ,ಪಟ್ಟಣ ಮಾರಾಟ ಸಮಿತಿ ರಚನೆ ಪ್ರಕ್ರಿಯೆ ಆರಂಭ

  |   Hassannews

ಹಾಸನ: ಕೃಷಿಭೂಮಿ ಹೊಂದಿರುವ ರೈತರು ಮತದಾರರಾಗಿರುವ ಕೃಷಿ ಉತ್ಪನ್ನ ಮಾರಾಟ ಸಮಿತಿಗಳ ಮಾದರಿಯಲ್ಲೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಮತದಾರರಾಗಿರುವ ಮಾರಾಟ ಸಮಿತಿ ರಚನೆಗೆ ಪ್ರಕ್ರಿಯೆ ಆರಂಭವಾಗಿದೆ.

ಕರ್ನಾಟಕ ಬೀದಿ ವ್ಯಾಪಾರಿಗಳ (ಜೀವನೋಪಾಯ ಸಂರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ನಿಯಮಗಳು 2019ರ ಅನುಷ್ಠಾನಕ್ಕಾಗಿ, ಪಟ್ಟಣ ಮಾರಾಟ ಸಮಿತಿಗೆ (ಟೌನ್‌ ವೆಂಡಿಂಗ್‌ ಕಮಟಿ) ಪ್ರತಿನಿಧಿಗಳನ್ನು ಪ್ರಜಾತಂತ್ರದ ವಿಧಾನ ಗಳಿಂದ ಆಯ್ಕೆ ಮಾಡಲು ಸೂಚಿಸಲಾಗಿದ್ದು, ಅರ್ಹ ಮತದಾರರ ಕರಡು ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸರ್ಕಾರ 2016 ರ ಸೆಪ್ಟೆಂಬರ್‌ನಲ್ಲಿ ರಚಿಸಿತ್ತು. ಈ ಇಲಾಖೆಯಡಿ ಕರ್ನಾಟಕ ಬೀದಿ ವ್ಯಾಪಾರದ (ಜೀವನೋಪಾಯದ ಸಂರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ನಿಯಮವನ್ನು ಸರ್ಕಾರ ಕಳೆದ ಜೂ.12 ರಂದು ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಕಟಿಸಿತ್ತು. ಇದರ ಅನ್ವಯ ಹಾಗೂ ರಾಜ್ಯ ಹೈಕೋರ್ಟ್‌ ಆ.22 ರಂದು ನೀಡಿರುವ ತೀರ್ಪು ಆಧರಿಸಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಅವರ ಅಧ್ಯಕ್ಷತೆಯಲ್ಲಿ ಸೆ.3 ರಂದು ನಡೆದ ಸಭೆಯಲ್ಲಿ ಪಟ್ಟಣ ಮಾರಾಟ ಸಮಿತಿ ರಚಿಸಲು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ನಿಗದಿತ ಅವಧಿಯಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದೆ....

ಫೋಟೋ - http://v.duta.us/4k9C2AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/drqTigAA

📲 Get Hassan News on Whatsapp 💬