ನಿರ್ಗಮನ ಏಕೆಂದು ಚರ್ಚೆಯಾಗಲಿ

  |   Dakshina-Kannadanews

ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್‌ ಸೆಂಥಿಲ್‌ ಅವರು ಐಎಎಸ್‌ ಹುದ್ದೆಗೆ ಶುಕ್ರವಾರ ದಿಢೀರ್‌ ರಾಜೀನಾಮೆ ಸಲ್ಲಿಸಿದ್ದಾರೆ. ಈ ನಿರ್ಧಾರದ ಕುರಿತು ಶಶಿಕಾಂತ ಸೆಂಥಿಲ್‌ ಅವರು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ.

ನಿಮ್ಮ ನಿರ್ಧಾರಕ್ಕೆ ಕಾರಣವೇನು?

ನಂಬಿಕೊಂಡು ಬಂದ ಸಿದ್ಧಾಂತ ಮತ್ತು ನನ್ನ ಸೇವಾ ಕಾರ್ಯಕ್ಕೂ ಸಂಘರ್ಷ ಏರ್ಪಟ್ಟಾಗ ನಾನು ಹುದ್ದೆಯನ್ನು ಬಿಡಬೇಕು ಅಥವಾ ಸಿದ್ಧಾಂತ ಬಿಡಬೇಕು. ಸಿದ್ಧಾಂತದೊಂದಿಗೆ ರಾಜಿ ಸಾಧ್ಯವಾಗದ ಕಾರಣ ಹುದ್ದೆ ತೊರೆದಿದ್ದೇನೆ. ನನ್ನ ರಾಜೀನಾಮೆ ನನ್ನ ವೈಯಕ್ತಿಕ ಕಾರಣಗಳಿಗಾಗಿ. ದೇಶದಲ್ಲಿ ನಡೆಯುತ್ತಿರುವ ಕೆಲವು ವಿದ್ಯಮಾನಗಳಿಂದ ನನಗೆ ಆಶ್ಚರ್ಯವಾಗುತ್ತಿದೆ. ಈಗಿನ ಒಂದಷ್ಟು ಬೆಳವಣಿಗೆಗಳು ನನಗೆ ಯಾವುದೋ ಕಾರಣಕ್ಕೆ ಒಪ್ಪಿಗೆಯಾಗುತ್ತಿಲ್ಲ.

ನಿರ್ದಿಷ್ಟವಾಗಿ ಯಾವ ವಿಚಾರದ ಬಗ್ಗೆ ನೀವು ಬೊಟ್ಟು ಮಾಡುತ್ತಿದ್ದೀರಿ?

ನಿರ್ದಿಷ್ಟವಾಗಿ ಇದು ಎನ್ನಲಾಗದು. ಬಹುತೇಕ ಎಲ್ಲ ವಿಚಾರದಲ್ಲಿಯೂ ಇಂತಹ ಬೆಳವಣಿಗೆ ನಡೆಯುತ್ತಿದೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆಯೋ ಎಂದು ಯೋಚಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ಪ್ರಾಯಃ ಒಂದು ದಿನವೇ ಬೇಕಾಗಬಹುದು.

ಒತ್ತಡವೇನಾದರೂ ಇತ್ತೇ?

ಅತ್ಯಂತ ಸ್ಪಷ್ಟವಾಗಿ ಹೇಳುತ್ತೇನೆ; ಜಿಲ್ಲೆಯಲ್ಲಿ ನನಗೆ ಯಾರ ಒತ್ತಡವೂ ಇರಲಿಲ್ಲ. ಯಾರೂ-ಯಾವ ಕಾರಣಕ್ಕೂ ಒತ್ತಡ ನೀಡಿಲ್ಲ. ಯಾವುದೇ ಸರಕಾರದ ಅವಧಿಯಲ್ಲಿಯೂ ಒತ್ತಡ ಬಂದಿರಲಿಲ್ಲ. ಒಂದು ವೇಳೆ ಸಣ್ಣಪುಟ್ಟ ಒತ್ತಡ ಇದ್ದರೂ ಅದನ್ನು ನಿಭಾಯಿಸುವ ಬಗೆಯೂ ನನಗೆ ಗೊತ್ತಿತ್ತು....

ಫೋಟೋ - http://v.duta.us/OqJeeAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/rhlnggAA

📲 Get Dakshina Kannada News on Whatsapp 💬