ಪೂರ್ಣಗೊಳ್ಳದ ಕಾಮಗಾರಿಯಿಂದ ಗ್ರಾಮಸ್ಥರ ನಿರೀಕ್ಷೆ ಹುಸಿ

  |   Udupinews

ಕೊಲ್ಲೂರು: ಚಿತ್ತೂರು ಗ್ರಾ.ಪಂ. ವ್ಯಾಪ್ತಿಯ ಸನ್ಯಾಸಿಬೆಟ್ಟಿನಲ್ಲಿನ ಹೊಳೆ ದಾಟಲು ನಿರ್ಮಾಣ ಗೊಂಡಿರುವ ಕಿರು ಸೇತುವೆ ಬಳಕೆಗೆ ಬಾರದೇ ನಿರುಪಯೋಗಿ ಆಗಿದ್ದು ಗ್ರಾಮಸ್ಥರ ಬಹಳಷ್ಟು ವರ್ಷಗಳ ನಿರೀಕ್ಷೆ ಹುಸಿಯಾಗಿದೆ.

10 ಲಕ್ಷ ರೂ. ವೆಚ್ಚದ ಕಿರುಸೇತುವೆ

ಸುಮಾರು 3 ವರುಷಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡ ಕಿರುಸೇತುವೆ ಪೂರ್ಣಗೊಳ್ಳದಿರುವುದು ಆ ಭಾಗದ ನಿವಾಸಿಗಳಿಗೆ ನಿತ್ಯ ಗೋಳಿನ ಕತೆಯಾಗಿದೆ. ಬಹಳಷ್ಟು ನಿರೀಕ್ಷೆ ಹಾಗೂ ಆತಂಕದ ವಾತಾವರಣದಿಂದ ಮುಕ್ತಿ ದೊರಕೀತು ಎಂಬ ಆಶಾಭಾವನೆಯಿಂದ ಜೀವಿಸುತ್ತಿರುವ ಮಂದಿಗೆ ನಿರಾಶೆಯಾಗಿದೆ.

ಜೀವ ಬಲಿತೆಗೆದ ಸನ್ಯಾಸಿ ಬೆಟ್ಟು

ಹೊಳೆಯ ಮರದ ದಿಣ್ಣೆ ಮಾರ್ಗ

ಸನ್ಯಾಸಿಬೆಟ್ಟು ಪರಿಸರದಲ್ಲಿ ವಾಸವಾಗಿರುವ 8,10 ಕುಟುಂಬಗಳಿಗೆ ಚಿತ್ತೂರು ಪೇಟೆಗೆ ಬರಲು ದಾಟಬೇಕಾದ ಹೊಳೆಗೆ ಮರದ ದಿಣ್ಣೆ ಜೋಡಿಸಿ ವ್ಯವಸ್ಥೆ ಗೊಳಿಸಲಾಗಿತ್ತು. ಮಳೆಗಾಲದಲ್ಲಿ ಮರದ ದಿಣ್ಣೆಯ ಮೇಲೆ ಸರ್ಕಸ್‌ ಮಾಡಿ ಅಪಾಯದ ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇತ್ತು. 2 ವರುಷಗಳ ಹಿಂದೆ ತಾಯಿಯೊಡನೆ ಆ ಮಾರ್ಗವಾಗಿ ಶಾಲೆಗೆ ಸಾಗುತ್ತಿದ್ದ ಬಾಲಕಿ ಕಾಲು ಜಾರಿ ಹೊಳೆಗೆ ಬಿದ್ದು ನೀರುಪಾಲಾಗಿ ಮೃತಪಟ್ಟಿದ್ದಳು. ತದನಂತರ ವಯೋವೃದ್ಧರು ಸಹಿತ ಅನೇಕ ಮಂದಿ ಕಾಲು ಜಾರಿ ನೀರಿಗೆ ಬಿದ್ದು ಬದುಕುಳಿದ ಘಟನೆ ನಡೆದಿತ್ತು. ಗ್ರಾಮಸ್ಥರ ಮನವಿಯಂತೆ ಮಾಜಿ ಶಾಸಕರು ಕಿರು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಗೊಳಿಸಿದ್ದರು....

ಫೋಟೋ - http://v.duta.us/3GCUbwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/BFP_UQAA

📲 Get Udupi News on Whatsapp 💬