ಪ್ರತಿಭೆ ಗುರುತಿಸುವ ಕೆಲಸ ಮಾಡಿ

  |   Yadgirinews

ಸೈದಾಪುರ: ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡುವಂತೆ ಹೇಳಿ ಶಿಕ್ಷಕ ಸಮೂದಾಯವನ್ನು ಗೌರವಿಸುವಂತೆ ಮಾಡಿದ್ದಾರೆ. ಇದರ ಮಹತ್ವ ಹೆಚ್ಚಾಗುವಂತೆ ಮಾಡಲು ಶಿಕ್ಷಕರು ಸಮರ್ಪಣಾ ಭಾವನೆಯೊಂದಿಗೆ ಕೆಲಸ ಮಾಡಬೇಕು ಎಂದು ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಹೇಳಿದರು.

ಇಲ್ಲಿನ ವಿದ್ಯಾವರ್ಧಕ ಡಿ.ಎಲ್.ಎಡ್‌ ಕಾಲೇಜಿನ ಪ್ರಶಿಕ್ಷಣಾರ್ಥಿಗಳ ವತಿಯಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳನ್ನು ಸಹಪಾಠಿಗಳು, ಗೆಳೆಯರಂತೆ ಕಾಣಬೇಕು. ಪ್ರತಿ ಮಗುವಿನಲ್ಲಿ ಅದರದೆಯಾದ ಪ್ರತಿಭೆ ಇರುತ್ತದೆ. ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ಭಾಗ ಶೈಕ್ಷಣಿಕವಾಗಿ ಅತೀ ಹಿಂದುಳಿದಿದೆ. ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಉನ್ನತ ಸ್ಥಾನ ಪಡೆಯುವಲ್ಲಿ ನೆರವಾಗಬೇಕು. ಇದಕ್ಕಾಗಿ ಇಚ್ಛಾ ಶಕ್ತಿಯೊಂದಿಗೆ ಶ್ರಮವಹಿಸಿ ಸೇವಾ ಮನೋಭಾವನೆಯೊಂದಿಗೆ ಕಾರ್ಯ ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಪ್ರಶಿಕ್ಷಣಾರ್ಥಿಗಳಾದ ಕವಿತಾ, ನಾಜನೀನ, ಚಂದ್ರಮ್ಮ, ಅಂಬ್ರೇಶ, ಶೃತಿ, ವಿಜಯಲಕ್ಷ್ಮೀ, ಮಲ್ಲಯ್ಯ ಮಾತನಾಡಿದರು. ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಜಿ.ಎಂ. ಗುರುಪ್ರಸಾದ, ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಹಣಮರಡ್ಡಿ ಮೋಟ್ನಳ್ಳಿ, ಶ್ವೇತಾ ರಾಘವೇಂದ್ರ ಪೂರಿ, ಆನಂದ ಪಾಟೀಲ ಕೊಂಡಾಪುರ ಸೇರಿದಂತೆ ಇತರರಿದ್ದರು. ಪ್ರಿಯಾಂಕಾ ಪ್ರಾರ್ಥನಾ ಗೀತೆ ಹಾಡಿದರು. ಪದ್ಮಾ ಸ್ವಾಗತಿಸಿದರು. ಸರಸ್ವತಿ ನಿರೂಪಿಸಿದರು. ಗೌರಮ್ಮ ವಂದಿಸಿದರು.

ಫೋಟೋ - http://v.duta.us/CrHxJQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ihCwcQAA

📲 Get Yadgiri News on Whatsapp 💬