ಬಿಕೆಡಿಬಿ ಅಭಿವೃದ್ಧಿಗೊಳಿಸಿದ ಸ್ಥಳ ಸರ್ಕಾರದ ಆಸ್ತಿ: ಮಹಾದೇವ

  |   Bidarnews

ಬಸವಕಲ್ಯಾಣ: ಪರಸ್ಪರ ಕಲಹದ ಮೂಲಕ ಶರಣರ ಭೂಮಿಯಲ್ಲಿ ಅಶಾಂತಿಯ ವಾತಾವರಣಕ್ಕೆ ಅವಕಾಶ ಮಾಡಿಕೊಡಬೇಡಿ. ಬಿಕೆಡಿಬಿಯಿಂದ ಅಭಿವೃದ್ಧಿಗೊಳಿಸಲಾದ ಎಲ್ಲ ಗವಿಗಳು ಸರ್ಕಾರ ಆಸ್ತಿಯೇ ವಿನಃ ಯಾವುದೇ ದೇವಸ್ಥಾನ ಸಮಿತಿ ಅಥವಾ ಸಂಘಗಳ ಆಸ್ತಿಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್‌.ಮಹಾದೇವ ಹೇಳಿದರು.

ನಗರದ ಬಂದವರ ಓಣಿಯಲ್ಲಿನ ರಾಮಲಿಂಗೇಶ್ವರ ಲಿಂಗ, ಭಾವಚಿತ್ರ ತೆರವು ಮತ್ತು ಅಕ್ಕಮಹಾದೇವಿ ಭಾವಚಿತ್ರ ಅಳವಡಿಸಿರುವ ವಿಷಯಕ್ಕೆ ಸಂಬಂಧ ಪಟ್ಟಂತೆ ಬಿಕೆಡಿಬಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಅವರು ಮಾತನಾಡಿದರು.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಾಗ ಬಂದವರ ಓಣಿಯನ್ನು ಅಕ್ಕಮಹಾದೇವಿ ಗವಿ ಎಂಬ ಹೆಸರಿನಲ್ಲಿ ಅದನ್ನು ಅಭಿವೃದ್ಧಿಗೊಳಿಸಲಾಗಿದೆ. ಹಾಗಾಗಿ ಇದು ಸರ್ಕಾರದ ಆಸ್ತಿಯಾಗಿರುತ್ತದೆ. ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿತ್ತಾರೆ. ಮೊದಲಿನಂತೆ ಬಂದವರ ಓಣಿ ಒಳಗಡೆ ಇರುವ ರಾಮಲಿಂಗೇಶ್ವರ ಲಿಂಗಕ್ಕೆ ಪೂಜೆ ಮಾಡಲು ಮತ್ತು ಅಕ್ಕಮಹಾದೇವಿ ಅವರಿಗೆ ಸಂಬಂಧ ಪಟ್ಟ ಕಾರ್ಯಕ್ರಮಗಳನ್ನು ಮಾಡಲು ಮುಕ್ತವಾಗಿ ಅವಕಾಶವಿದೆ. ಅದನ್ನು ಬಿಟ್ಟು ವಿನಾಕಾರಣ ಗೊಂದಲ ಸೃಷ್ಟಿ ಮಾಡಿದರೆ ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು....

ಫೋಟೋ - http://v.duta.us/PbkDTgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/jy0bPQAA

📲 Get Bidar News on Whatsapp 💬