ಬಿಜೆಪಿಯಿಂದ ಸಮುದಾಯ ಗುರುತಿಸುವ ಕೆಲಸವಾಗಿದೆ

  |   Bangalore-Ruralnews

ದೇವನಹಳ್ಳಿ: ಸಮಾಜದ ಹಿರಿಯ ಮುಖಂಡ ಗೋವಿಂದ ಕಾರಜೋಳರಿಗೆ ಉಪಮುಖ್ಯಮಂತ್ರಿ ಜೊತೆಗೆ ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಸಚಿವ ಸ್ಥಾನ ನೀಡಿ, ಸಮುದಾಯ ಗುರುತಿಸಿರುವ ಸಿಎಂ ಯಡಿಯೂರಪ್ಪಗೆ ಸಮುದಾಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಜಿ. ಮಾರಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಾದಿಗ ದಂಡೋರ ವತಿಯಿಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಇದ್ದಾಗ ನ್ಯಾಯ ಮುರ್ತಿ ಎ.ಜೆ. ಸದಾಶಿವ ಆಯೋಗ ರಚಿಸಿ, ಅನುದಾನ ಬಿಡುಗಡೆಗೊಳಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸದಾಶಿವ ವರದಿಯನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಕಳುಹಿಸಬೇಕು.

ಬಹಳಷ್ಟು ದಿನಗಳಿಂದ ಸದಾಶಿವ ವರದಿ ಕನಸನ್ನು ಸಮುದಾಯ ಹೊತ್ತಿದೆ. ಸಾಕಷ್ಟು ಹೋರಾಟ ಮಾಡಲಾಗಿದೆ. ಸಮುದಾಯವನ್ನು ಗುರುತಿಸಿ ಇರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಜಗಜೀವನ್‌ ಭವನಗಳು ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಹೆಚ್ಚಿನ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಮಾದಿಗ ದಂಡೋರ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಹಿರಿಯ ಮುಖಂಡ ಗೋವಿಂದ ಕಾರಜೋಳರಿಗೆ ಡಿಸಿಎಂ ಪಟ್ಟ ನೀಡಿರುವುದು ಸಂತಸ ತಂದಿದೆ. ಸಮುದಾಯವನ್ನು ಗುರುತಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾರಜೋಳ, ಸಂಸದ ಎ.ನಾರಾಯಣಸ್ವಾಮಿ, ರಮೇಶ್‌ ಜಿಣಜಿಣಗಿ, ಶಾಸಕಿ ರೂಪಾ ಸೇರಿದಂತೆ ಹಲವರನ್ನು ಕರೆಸಿ ಸಮಾವೇಶ ನಡೆಸಲಾಗುವುದು. ದಿನಾಂಕ ವನ್ನು ನಿಗದಿ ಪಡಿಸಲಾಗುವುದು....

ಫೋಟೋ - http://v.duta.us/CluC0wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/zwR9VAAA

📲 Get Bangalore Rural News on Whatsapp 💬