ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ!

  |   Karnatakanews

ರಾಯಚೂರು: ಹೈದರಾಬಾದ್‌- ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2019-20ನೇ ಸಾಲಿನ ಖರ್ಚಾಗದೆ ಬಾಕಿ ಉಳಿದ ಅನುದಾನವನ್ನು ಕೇವಲ ಬಿಜೆಪಿ ಕ್ಷೇತ್ರಗಳಿಗೆ ಹಂಚಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಪಕ್ಷಭೇದ ತೋರಿದೆ. ಬಾಕಿ ಉಳಿದ 75 ಕೋಟಿ ರೂ.ಅನುದಾನಕ್ಕೆ ಸಂಬಂ ಧಿಸಿದಂತೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದೆ ಅನುಮೋದನೆ ಪಡೆದಿದ್ದ ಆದೇಶ ರದ್ದುಪಡಿಸಿ, ಹೊಸ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಸರ್ಕಾರದ ವಿವೇಚನಾ ಕೋಟಾದಡಿ ಮೀಸಲಿಟ್ಟಿದ್ದ 75 ಕೋಟಿ ರೂ.ಹಣವನ್ನು ಎಚ್‌ಕೆಆರ್‌ಡಿಬಿ ವ್ಯಾಪ್ತಿಗೆ ಒಳಪಡುವ ವಿಧಾನಸಭೆಗಳಿಗೆ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಿ ಆದೇಶಿಸಲಾಗಿತ್ತು. ಆದರೆ, ಹಂಚಿಕೆ ಮಾಡಿದ ಅನುದಾನ ಬಳಕೆಯಾಗದಿರುವ ಕಾರಣ 2019, ಸೆ.18ರಂದು ಹಂಚಿಕೆ ಮಾಡಿ ಅನುಮೋದನೆ ಪಡೆದಿದ್ದ ಆದೇಶ ರದ್ದುಗೊಳಿಸಿ ಮರು ಹಂಚಿಕೆ ಆದೇಶ ಹೊರಡಿಸಲಾಗಿದೆ.

ಅದರಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ 18 ಕೋಟಿ ರೂ.ಮಂಜೂರಾಗಿದೆ. ಬಿಜೆಪಿ ಶಾಸಕರಿರುವ ನಗರ ಕ್ಷೇತ್ರಕ್ಕೆ ನಾಲ್ಕು ಕೋಟಿ, ದೇವದುರ್ಗ ಕ್ಷೇತ್ರಕ್ಕೆ ಮೂರು ಕೋಟಿ ಹಾಗೂ ಪ್ರತಾಪಗೌಡ ಪಾಟೀಲ ರಾಜೀನಾಮೆಯಿಂದ ತೆರವಾದ ಮಸ್ಕಿ ಕ್ಷೇತ್ರಕ್ಕೆ 11 ಕೋಟಿ ರೂ. ನೀಡಲಾಗಿದೆ. ಆದರೆ, ಕಾಂಗ್ರೆಸ್‌ ಶಾಸಕರಿರುವ ಗ್ರಾಮೀಣ ಕ್ಷೇತ್ರ, ಲಿಂಗಸುಗೂರು, ಜೆಡಿಎಸ್‌ ಶಾಸಕರಿರುವ ಮಾನ್ವಿ, ಸಿಂಧ ನೂರು ಕ್ಷೇತ್ರಗಳನ್ನು ಕೈ ಬಿಡಲಾಗಿದೆ.

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/l9MlTgAA

📲 Get Karnatakanews on Whatsapp 💬