ಬರವಿದ್ದರೂ ತಪ್ಪದ ನೆರೆ ಭೀತಿ!

  |   Bagalkotnews

ಬಾಗಲಕೋಟೆ: ಜಿಲ್ಲೆಯ ಮೂರು ನದಿ ಪಾತ್ರದ ಜನರೇ ಈ ಬಾರಿ ಯಾರೂ ಹುಂಬತನ ಮಾಡಬೇಡಿ. ಹುಸಾರಾಗಿ ಇರಿ. ಯಾವುದೇ ಕ್ಷಣದಲ್ಲಿ ಪ್ರವಾಹ ಬರುವ ಮುನ್ಸೂಚನೆ ದೊರೆತರೂ, ಕೂಡಲೇ ಸುರಕ್ಷಿತ ಸ್ಥಳಕ್ಕೆ ಹೋಗಿ…!

ಕೆಲವರ ಹುಂಬತನ, ಇನ್ನೂ ಕೆಲವರ ನಿಷ್ಕಾಳಜಿಯಿಂದ ಕಳೆದ ತಿಂಗಳು ಬಂದಿದ್ದ ಪ್ರವಾಹದ ವೇಳೆ ಪ್ರಾಣಾಪಾಯದಲ್ಲಿ ಸಿಲುಕಿದ್ದರು. ಇನ್ನೂ ಕೆಲವರು ತಮ್ಮ ಜಾನುವಾರು ತರಲು ಹೋಗಿ, ಅಪಾಯದಲ್ಲಿ ಸಿಲುಕಿ ಸಂಕಷ್ಟ ಎದುರಿಸಿದ್ದರು.

ಇಡೀ ಜಿಲ್ಲಾಡಳಿತದ ಸಂಘಟಿತ ಪ್ರಯತ್ನದ ಜತೆಗೆ ಜನರ ಸುರಕ್ಷತೆಗಾಗಿ ಕೈಗೊಂಡ ತುರ್ತು ರಕ್ಷಣಾ ಕಾರ್ಯದಿಂದ ಹಲವರ ಪ್ರಾಣ ಉಳಿದವು. ಒಂದು ವೇಳೆ ಜಿಲ್ಲಾಡಳಿತವೂ ನಿಷ್ಕಾಳಜಿ ಮಾಡಿದ್ದರೆ, 105 ವರ್ಷಗಳ ಬಳಿಕ ಬಂದ ಭಾರಿ ಪ್ರವಾಹಕ್ಕೆ ಹಲವು ಸಾವು-ನೋವು ಸಂಭವಿಸುತ್ತಿದ್ದವು. ಅದೃಷ್ಟವಶಾತ್‌ ಜಿಲ್ಲೆಯ ಜನರ, ಮೂರು ನದಿಗಳ ಪ್ರವಾಹಕ್ಕೆ ಬದುಕು ಬರಡಾಯಿತೇ ಹೊರತು, ಸಾವು-ನೋವು ಸಂಭವಿಸಲಿಲ್ಲ. ಪ್ರವಾಹದ ವೇಳೆ ಮೂವರು ಮೃತಪಟ್ಟಿದ್ದರಾದರೂ, ಅವರು ಪ್ರವಾಹದ ನೀರಿನಿಂದ ಮೃತಪಟ್ಟವರಲ್ಲ. ಅನಾರೋಗ್ಯ, ಹಾವು ಕಚ್ಚಿ ಹಾಗೂ ಓರ್ವ ವ್ಯಕ್ತಿ ಮನೆಗೆ ಹೊಕ್ಕ ನೀರಿನಲ್ಲೇ ಮೃತಪಟ್ಟಿದ್ದ....

ಫೋಟೋ - http://v.duta.us/0OcgEAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/brWb7gAA

📲 Get Bagalkot News on Whatsapp 💬