ಮುಂಗಾರು ಬೆಳೆ ಕಟಾವು ಸಮೀಕ್ಷೆ ಎಡವಟ್ಟು

  |   Koppalnews

ಕೊಪ್ಪಳ: ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರಿನಲ್ಲಿ ಬೆಳೆ ಕಟಾವು ಸಮೀಕ್ಷೆಯಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ರೈತರಿಗೆ ಬರಬೇಕಿದ್ದ ಬೆಳೆವಿಮೆ ಬರದಂತ ಪರಿಸ್ಥಿತಿ ಎದುರಾಗಿದೆ. ಅಚ್ಚರಿಯಂದರೆ ಯಾರದೋ ಜಮೀನಿನಲ್ಲಿ ಮಾಡಬೇಕಿದ್ದ ಬೆಳೆ ಕಟಾವು ಸಮೀಕ್ಷೆ ಇನ್ಯಾರಧ್ದೋ ಜಮೀನಿನಲ್ಲಿ ಮಾಡಿದ್ದಾರೆ.

ಹೌದು.. ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ಕಟಾವು ಸಮೀಕ್ಷೆ ಕಳೆದ ವರ್ಷ ಸರಿಯಾಗಿ ನಡೆದಿಲ್ಲ. ಇದರಿಂದ ನಮಗೆ ಬೆಳೆ ವಿಮೆಯೂ ಬಂದಿಲ್ಲ ಎಂದು ರೈತರು ವೇದನೆ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ ಭೀಕರ ಬರದ ಪರಿಸ್ಥಿತಿಯಿಂದಾಗಿ ರೈತ ಸಮೂಹ ಬೆಂದು ಹೋಗಿತ್ತು. ಬಿತ್ತನೆ ಮಾಡಿದ ಬೆಳೆ ಮೊಳಕೆ ಒಡೆಯುವ ಹಂತದಲ್ಲೇ ಕಮರಿ ಹೋಗಿತ್ತು. ಬೆಳೆ ರಕ್ಷಣೆಗಾಗಿ ಮೊದಲೇ ವಿಮೆ ಮಾಡಿಸಿಕೊಂಡಿದ್ದ ಹಲವು ರೈತರು ವಿಮೆ ಹಣವಾದರೂ ನಮ್ಮ ಕೈ ಸೇರಲಿದೆ ಎಂಬ ನಂಬಿಕೆಯಿಂದ ವಿಮೆ ಹಣಕ್ಕಾಗಿ ಕಾಯುತ್ತಿದ್ದರು. ಇಲಾಖೆ ಹಂತದಲ್ಲಿ ಮಾಡಿದ ಎಡವಟ್ಟು ಈಗ ಬೆಳಕಿಗೆ ಬಂದಿದೆ.

ಬೆಳೆ ಕಟಾವು ಸಮೀಕ್ಷೆ ಮಾಡುತ್ತೆ: ಸರ್ಕಾರ ಪ್ರತಿ ವರ್ಷ ಬೆಳೆ ಕಟಾವು ಸಮೀಕ್ಷೆಯನ್ನು ಕೈಗೊಳ್ಳುತ್ತದೆ. ಜಿಲ್ಲೆಯಲ್ಲಿನ ಗ್ರಾಪಂ ಹಂತದಲ್ಲಿ ಮಳೆಯಾಶ್ರಿತ ಪ್ರದೇಶದ ಆಯ್ದ ರೈತರ ಜಮೀನುಗಳನ್ನು ಮೊದಲೇ ಆಯ್ಕೆ ಮಾಡಿಕೊಳ್ಳುತ್ತದೆ. ಆ ರೈತರ ಜಮೀನಿನಲ್ಲಿ ಇರುವ ಬೆಳೆಯನ್ನು ನಾಲ್ಕು ವಿಧಾನದಲ್ಲಿ ಬೆಳೆ ಕಟಾವು ಸಮೀಕ್ಷೆ ಮಾಡುತ್ತದೆ. ಆ ಇಳುವರಿ ಜಿಪಿಎಸ್‌ ಆಧಾರಿತವಾಗಿರುತ್ತದೆ. ಅಲ್ಲದೇ ಇದೇ ಬೆಳೆ ಕಟಾವು ಸಮೀಕ್ಷೆ ಇಳುವರಿ ಲೆಕ್ಕಾಚಾರದ ಮೇಲೆ ಬೆಳೆ ವಿಮೆಯು ರೈತರಿಗೆ ಬರಲಿದೆ. ಒಂದು ವೇಳೆ ಕಟಾವಿನ ವಿಧಾನದಲ್ಲಿ ನಿಗದಿಗಿಂತ ಹೆಚ್ಚಿನ ಇಳುವರಿ ಬಂದರೆ ಆ ರೈತನಿಗೆ ಬೆಳೆ ವಿಮೆ ಬರುವುದಿಲ್ಲ....

ಫೋಟೋ - http://v.duta.us/JWKq3wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7pQAYgAA

📲 Get Koppal News on Whatsapp 💬