ಮಂಡಕ್ಕಿ ಭಟ್ಟಿಯಲ್ಲಿ ಸಮಸ್ಯೆಗಳ ಸರಮಾಲೆ!

  |   Shimoganews

•ಎಚ್.ಕೆ.ಬಿ. ಸ್ವಾಮಿ

ಸೊರಬ: ಸಾರ್ವಜನಿಕರಿಗೆ ಶುದ್ಧ ನೀರು, ಸಮರ್ಪಕ ಶೌಚಗೃಹ, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಸೇರಿ ಮೊದಲಾದ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಸ್ಥಳೀಯ ಆಡಳಿತದ ಕರ್ತವ್ಯ. ಆದರೆ, ಇಲ್ಲಿನ 11ನೇ ವಾರ್ಡ್‌ನ ಡಾ| ಬಿ.ಆರ್‌. ಅಂಬೇಡ್ಕರ್‌ ಬಡಾವಣೆಯ ಮಂಡಕ್ಕಿ ಬಟ್ಟಿ ಏರಿಯಾ (ಹಳೇ ಗೌರಿ ಶಂಕರ ಮಿಲ್ ಹಿಂಭಾಗ) ಒಂದು ಸುತ್ತು ಹಾಕಿದರೆ ಇಲ್ಲಿನ ನಿವಾಸಿಗಳ ಸಮಸ್ಯೆ ಗೋಚರಿಸುತ್ತದೆ.

800 ಮತದಾರರಿರುವ ವಾರ್ಡ್‌ನಲ್ಲಿ ಸುಮಾರು 200 ಮಂದಿ ಇದೇ ಕೊಳಚೆ ಪ್ರದೇಶದಲ್ಲಿಯೇ ಅನೇಕ ಮೂಲ ಸೌಕರ್ಯಗಳ ಕೊರತೆ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಗಾರೆ ಕೆಲಸಗಾರರು, ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರು, ಕೂಲಿ ಕಾರ್ಮಿಕರೇ ವಾಸವಾಗಿರುವ ವಾರ್ಡ್‌ನಲ್ಲಿ ಈವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪಟ್ಟಣ ಪಂಚಾಯತ್‌ಗೆ ಸಾಧ್ಯವೇ ಆಗಿಲ್ಲ.

ಸರಾಗವಾಗಿ ಹರಿಯದ ಕೊಳಚೆ ನೀರು: ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು ನಿಂತಲ್ಲೇ ನಿಂತಿದೆ. ಹೀಗಾಗಿ ಇಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಜನತೆಗೆ ಸಾಂಕ್ರಾಮಿಕ ರೋಗಗಳ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಮಳೆ ಬಂತೆಂದರೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಪಟ್ಟಣ ಪ್ರದೇಶದಲ್ಲಿ ಯಾವುದೇ ಸೌಲಭ್ಯಗಳಲ್ಲಿದೇ ಆದಿವಾಸಿಗಳಂತೆ ಜನತೆ ಜೀವನ ಸಾಗಿಸುತ್ತಿದ್ದಾರೆ ಎಂದರೆ ನಿಜಕ್ಕೂ ವಿಪರ್ಯಾಸದ ಸಂಗತಿ....

ಫೋಟೋ - http://v.duta.us/fWHANAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/zY6BMwAA

📲 Get Shimoga News on Whatsapp 💬