ಮುದಗಲ್ಲ ಐತಿಹಾಸಿಕ ಮೊಹರಂಗೆ ಚಾಲನೆ

  |   Raichurnews

ಮುದಗಲ್ಲ: ಇತಿಹಾಸ ಪ್ರಸಿದ್ಧ ಮುದಗಲ್ಲ ಮೊಹರಂ ಆಚರಣೆ ಆರಂಭವಾಗಿದೆ. ಸೆ.1ರಿಂದ ಆರಂಭವಾಗಿರುವ ಮುದಗಲ್ಲ ಮೊಹರಂ ಅಂಗವಾಗಿ ವಿವಿಧ ದರ್ಗಾಗಳಲ್ಲಿ ಪ್ರತಿಷ್ಠಾಪಿಸಲಾದ ಆಲಂಗಳಿಗೆ ವಿಶೇಷ ಪೂಜೆ ನೆರವೆರಿಸಲಾಗುತ್ತಿದೆ. ಗುರುವಾರ ಹಸನ್‌-ಹುಸೇನ್‌ ಆಲಂಗಳಿಗೆ ಜಿಹಾಲ್ ಕಾರ್ಯಕ್ರಮ ನಡೆಯಿತು.

ಕಿಲ್ಲಾದ ಹಜರತ್‌ ಹುಸೇನ್‌ ಆಲಂ ದರ್ಗಾವನ್ನು ಬಣ್ಣಗಳಿಂದ ಚಿತ್ರಿಸಲಾಗಿದ್ದು, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಬಂದ ಆಲಂಗಳಿಗೆ ದರ್ಗಾದ ಹಿಂಬದಿಯಲ್ಲಿರುವ ಐತಿಹಾಸಿಕ ಬಾವಿ ಪವಿತ್ರ ನೀರಿನಲ್ಲಿ ಮಜ್ಜನ ಮಾಡಿಸಲಾಯಿತು. ಇತ್ತ ಪಟ್ಟಣದ ಪ್ರಮುಖ ರಸ್ತೆ, ಕಿಲ್ಲಾದಲ್ಲಿ ಅಚ್ಚೋಳ್ಳಿ ಬಾವಗಳ ನಾದ, ಹೆಜ್ಜೆ ಕುಣಿತ, ತಮಟೆ-ನಗಾರಿ ನಾದ ಗಮನಸೆಳೆಯುತ್ತಿದೆ.

ಅನುದಾನ ಕೊರತೆ: ಐತಿಹಾಸಿಕ ಹಬ್ಬ ಮುದಗಲ್ಲ ಮೊಹರಂ ಆಚರಣೆಗೆ ಪುರಸಭೆಯಲ್ಲಿ ಅನುದಾನದ ಕೊರತೆ ಉಂಟಾಗಿದೆ. ವಿಶೇಷ ಅನುದಾನದಲ್ಲಿ 12 ಲಕ್ಷ ರೂ ಹಣ ಬಿಡುವಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ವಿಶೇಷ ಅನುದಾನ ನೀಡಲು ಬರುವುದಿಲ್ಲ. ಅಂದಾಗ ಶಾಸಕರ ಸ್ಥಳೀಯ ನಿಧಿಯಲ್ಲಿ 7 ಲಕ್ಷ ರೂ. ನೀಡುವಂತೆ ಪುರಸಭೆ ಆಡಳಿತ ಮನವಿ ಮಾಡಿದೆ. ಆದರೆ ಅನುದಾನ ಬಿಡುಗಡೆ ಯಾಗಿಲ್ಲ ಹಾಗಾಗಿ ಮೊಹರಂ ಭಕ್ತರಿಗೆ ಸೌಕರ್ಯ ಕಲ್ಪಿಸಲು ತೊಂದರೆಯಾಗಬಹುದು ಎಂದು ಪುರಸಭೆ ಸದಸ್ಯರು ತಿಳಿಸಿದ್ದಾರೆ. ಪುರಸಭೆ ಸ್ಥಳೀಯ ಅನುದಾನದಲ್ಲಿ ಹಬ್ಬಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು, ಬೀದಿದೀಪ ವ್ಯವಸ್ಥೆ, ಕೋಟೆ ಜಂಗಲ್ಕಟಿಂಗ್‌, ವಾಹನ ಮತ್ತು ಅಂಗಡಿಕಾರರಿಗೆ ಜಾಗದ ವ್ಯವಸ್ಥೆ ಮಾಡಲಾಗುತ್ತಿದೆ. 23 ಜನ ಪುರಸಭೆ ಕಾರ್ಮಿಕರ ಜತೆಗೆ 12 ಜನ ಹೊರಗುತ್ತಿಗೆ ಕಾರ್ಮಿಕರನ್ನು ಪಡೆದು ಪಟ್ಟಣದ ಸ್ವಚ್ಛತೆ ಜತೆಗೆ ಮೊಹರಂಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ನರಸಂಹಮೂರ್ತಿ ತಿಳಿಸಿದ್ದಾರೆ....

ಫೋಟೋ - http://v.duta.us/TRGL9QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/fRejowAA

📲 Get Raichur News on Whatsapp 💬