ಮೊದಲು ಅಂಡರ್‌ಪಾಸ್‌, ನಂತರ ಷಟ್ಪಥ ರಸ್ತೆ

  |   Davanagerenews

ದಾವಣಗೆರೆ: ದಾವಣಗೆರೆ ತಾಲೂಕಿನ ಲಕ್ಕಮುತ್ತೇನಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ, ಮಲ್ಲಶೆಟ್ಟಿಹಳ್ಳಿ, ಎಚ್. ಕಲ್ಪನಹಳ್ಳಿ ಬಳಿ ಅಂಡರ್‌ಪಾಸ್‌, ಬಾಡ ಕ್ರಾಸ್‌ ಸಮೀಪ ಪ್ರವೇಶದ್ವಾರ ಕಾಮಗಾರಿಗೆ ಅನುಮತಿ ದೊರೆಯುವ ತನಕ ಷಟ್ಪಥ ಯೋಜನೆ ಕಾಮಗಾರಿಗೆ ಅವಕಾಶವನ್ನೇ ನೀಡುವುದಿಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಶುಕ್ರವಾರ ಅಪರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಬೇಡಿಕೆಯಂತೆ ನಾವು ಶಿಫಾರಸು ಮಾಡಿರುವ ಕೆಲಸಗಳಿಗೆ ಮಂಜೂರಾತಿ ದೊರೆಯದಿದ್ದಲ್ಲಿ ಯಾವುದೇ ಕಾರಣಕ್ಕೂ ಕೆಲಸ ಪ್ರಾರಂಭಿಸಿಲು ಬಿಡುವುದೇ ಇಲ್ಲ ಎಂದು ಎಚ್ಚರಿಸಿದರು.

ಲಕ್ಕಮುತ್ತೇನಹಳ್ಳಿ ಬಳಿ ಅಂಡರ್‌ಪಾಸ್‌ಗೆ ತಾಂತ್ರಿಕವಾಗಿ ಅನುಮತಿ ದೊರೆಯುವುದಿಲ್ಲ. ನಿಯಮದ ಪ್ರಕಾರ 2 ಕಿಲೋ ಮೀಟರ್‌ಗೆ ಒಂದು ಅಂಡರ್‌ಪಾಸ್‌ ಮಾಡಬೇಕು. 700 ಮೀಟರ್‌ ಅಂತರದಲ್ಲಿ ಎಮ್ಮೆಹಟ್ಟಿ ಬಳಿ ಅಂಡರ್‌ಪಾಸ್‌ ಇದೆ. ಹಾಗಾಗಿ ಅಂಡರ್‌ಪಾಸ್‌ ಮಾಡಲಿಕ್ಕೆ ಬರುವುದಿಲ್ಲ ಎಂದು ಈಚೆಗೆ ಪರಿಶೀಲನೆ ನಡೆಸಿದ ಹಿರಿಯ ಅಧಿಕಾರಿಗಳ ತಂಡ ತಿಳಿಸಿ, ಮಂಜೂರಾತಿ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು....

ಫೋಟೋ - http://v.duta.us/mleTiAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/4LONigAA

📲 Get Davanagere News on Whatsapp 💬