ಮಾಸಾಂತ್ಯಕ್ಕೆ ಸಿಗದ ಅನ್ನಭಾಗ್ಯ ಯೋಜನೆ ಸಾಮಗ್ರಿ

  |   Udupinews

ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದ ಕೆಲವು ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳ ಅಂತ್ಯದವರೆಗೆ ಅನ್ನಭಾಗ್ಯ ಯೋಜನೆ ಸಾಮಗ್ರಿಗಳು ವಿತರಣೆಯಾಗದ ಹಿನ್ನೆಲೆಯಲ್ಲಿ ಜನರು ಪಡಿತರ ಸಾಮಗ್ರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯಿಂದ ಜಿಲ್ಲೆಗಳಿಗೆ ವಲಸೆ ಹೋಗುವ ಕುಟುಂಬಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಸರಕಾರ ನಿಯಮದ ಅನ್ವಯ ರಾಜ್ಯದ ಪಡಿತರ ಕಾರ್ಡ್‌ ಹೊಂದಿರುವವರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಬೇಕಾದರೂ ಸಾಮಗ್ರಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ನಿಯಮವೇ ಕುತ್ತು

ಸರಕಾರ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಬರುವ ಕಾರ್ಡ್‌ದಾರರಿಗೆ ಅಗತ್ಯವಿರುವಷ್ಟು ಸಾಮಗ್ರಿಗಳು ಮಾತ್ರ ಹಂಚಿಕೆಯಾಗುತ್ತಿವೆ. ಸಿಮೀತ ದಾಸ್ತಾನಿನಲ್ಲಿಯೇ ಇತರೆ ಜಿಲ್ಲೆ ಹಾಗೂ ಪ್ರದೇಶದ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆ ಸಾಮಗ್ರಿ ವಿತರಿಸಬೇಕಾಗಿದೆ. ಇದರಿಂದಾಗಿ ಉಡುಪಿ ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿಗೂ ಮುನ್ನವೇ ಸಾಮಗ್ರಿಗಳು ಖಾಲಿಯಾಗುತ್ತಿದೆ. ನ್ಯಾಯಬೆಲೆ ಅಂಗಡಿ ವ್ಯಾಪ್ತಿ ಕಾರ್ಡ್‌ದಾರರು ಖಾಲಿ ಕೈಯಲ್ಲಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇತರೆ ಪ್ರದೇಶದ 3,558 ಪಡಿತರ

ಜಿಲ್ಲೆಯಲ್ಲಿ ಪ್ರಸ್ತುತ 291 ಪಡಿತರ ಅಂಗಡಿಗಳಿವೆ. ಕುಂದಾಪುರ 116, ಕಾರ್ಕಳ 56, ಉಡುಪಿ 119 ಪಡಿತರ ಅಂಗಡಿಗಳಿವೆ. ಆಗಸ್ಟ್‌ ತಿಂಗಳಲ್ಲಿ ಕಾರ್ಕಳದಲ್ಲಿ 949, ಉಡುಪಿಯಲ್ಲಿ 1690, ಕುಂದಾಪುರದಲ್ಲಿ 919 ಕಾರ್ಡ್‌ ಸೇರಿದಂತೆ ಇತರೆ ಪ್ರದೇಶದ 3,558 ಕಾರ್ಡ್‌ದಾರರು ಜಿಲ್ಲೆಯಲ್ಲಿ ಪಡಿತರ ಪಡೆದುಕೊಳ್ಳುತ್ತಿದ್ದಾರೆ....

ಫೋಟೋ - http://v.duta.us/MrZ6dQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/QWWH-QAA

📲 Get Udupi News on Whatsapp 💬