ಮೈಸೂರು ದಸರಾದಲ್ಲಿ ಸಂತ್ರಸ್ತರ ಅಳಲು

  |   Belgaumnews

ಬೆಳಗಾವಿ: ಎಂದೂ ಕಂಡು ಕೇಳರಿಯದಷ್ಟು ಬಂದು ಅಪ್ಪಳಿಸಿದ ಪ್ರವಾಹದ ಅಘಾತದಿಂದ ಜನ ಇನ್ನೂ ಹೊರಬಂದಿಲ್ಲ. ಪ್ರವಾಹದಿಂದ ನಲುಗಿದ ಇಲ್ಲಿಯ ಜನಜೀವನ ಹಾಗೂ ಅದಕ್ಕೆ ಸರ್ಕಾರ ಸ್ಪಂದಿಸಿದ ಪರಿಕಲ್ಪನೆಯೇ ಈ ಸಲ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಬೆಳಗಾವಿ ಜಿಲ್ಲೆಯ ಸ್ತಬ್ಧ ಚಿತ್ರವಾಗಲಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮರವಣಿಗೆಯಲ್ಲಿ ಜಂಬೂ ಸವಾರಿ ಬಿಟ್ಟರೆ ರೂಪಕಗಳು ಅತಿ ಹೆಚ್ಚು ಆಕರ್ಷಣೀಯವಾಗಿರುತ್ತವೆ. ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳು ಆಯಾ ಜಿಲ್ಲೆಗಳ ವಿಶೇಷತೆ ಹೊಂದಿರುತ್ತವೆ. ಪ್ರತಿ ವರ್ಷ ಒಂದಿಲ್ಲೊಂದು ವಿಶೇಷತೆಯುಳ್ಳ ಸ್ತಬ್ಧ ಚಿತ್ರಗಳು ದಸರಾ ಉತ್ಸವದಲ್ಲಿ ಗಮನ ಸೆಳೆಯುತ್ತವೆ. ಅದೇ ರೀತಿ ಈ ಸಲವೂ ವಿವಿಧ ವಿಭಿನ್ನ ಶೈಲಿಯ ರೂಪಕಗಳನ್ನು ಕಳುಹಿಸುವಂತೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಪ್ರವಾಹದ ಸ್ಥಿತಿಗತಿ ಹಾಗೂ ಅದರಿಂದ ನಲುಗಿದ ಜನರ ಅಳಲು ಬಿಂಬಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಗಡಿ ಜಿಲ್ಲೆಯಲ್ಲಿ ಈ ಸಲ ಭಾರೀ ಪ್ರಮಾಣದಲ್ಲಿ ಜಲ ಪ್ರಳಯವಾಗಿದೆ. ಮಹಾರಾಷ್ಟ್ರದಿಂದ ಹರಿದು ಬಂದ ನೀರು ಹಾಗೂ ಜಿಲ್ಲೆಯ ಬಹುತೇಕ ಎಲ್ಲ ತಾಲೂಕಿನಲ್ಲಿ ಸುರಿದ ಮಳೆಯಿಂದ ಎಲ್ಲ ನದಿಗಳು ತುಂಬಿ ಹರಿದಿವೆ. ಜಲಾಶಯಗಳು ತುಂಬಿ ಅಲ್ಲೋಲ ಕಲ್ಲೋಲ ಸೃಷ್ಟಿಸಿವೆ. ಸೇತುವೆಗಳು, ನೂರಾರು ಗ್ರಾಮಗಳು, ರಸ್ತೆ, ಮಾರ್ಗಗಳು ಮುಳುಗಡೆಯಾಗಿವೆ. ಜನ ಸಂಪರ್ಕದ ಜತೆಗೆ ಜನ ಸಂಬಂಧವನ್ನೇ ಮುಳುಗಡೆ ಮಾಡಿದ ಈ ಪ್ರವಾಹ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ಇದೇ ಪ್ರಮುಖ ವಿಷಯವನ್ನಾಗಿ ಇಟ್ಟುಕೊಂಡು ಜಿಲ್ಲಾಡಳಿತ ದಸರಾ ಉತ್ಸವದಲ್ಲಿ ಬಿಂಬಿಸಲು ತಯಾರಿ ನಡೆಸಿದೆ....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/hH2p3AAA

📲 Get Belgaum News on Whatsapp 💬