ಯೋಜನಾಬದ್ಧ ಕೃಷಿಯಿಂದ ಅಧಿಕ ಲಾಭ

  |   Chitradurganews

ನಾಯಕನಹಟ್ಟಿ: ಯೋಜನಾಬದ್ಧ ಕೃಷಿ ಕೈಗೊಂಡರೆ ಮಾತ್ರ ಲಾಭ ಗಳಿಕೆ ಸಾಧ್ಯ ಎಂದು ಪ್ರಗತಿಪರ ರೈತ ಎಸ್‌.ಸಿ. ವೀರಭದ್ರಪ್ಪ ಹೇಳಿದರು.

ಇಲ್ಲಿನ ಮೈರಾಡ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ತಿಪ್ಪೇರುದ್ರಸ್ವಾಮಿ ರೈತ ಉತ್ಪಾದಕರ ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ರೈತರು ತಾವು ಹೊಂದಿರುವ ಭೂಮಿಯಲ್ಲಿ ನಿರಂತರ ಆದಾಯ ಪಡೆಯುವ ಬೆಳೆಗಳನ್ನು ಬೆಳೆಯಬೇಕು. ಕೇವಲ ಖುಷ್ಕಿ ಭೂಮಿ ಹೊಂದಿದ್ದರೆ ಅಲ್ಲಿನ ಎಲ್ಲ ನೀರನ್ನು ಕನಿಷ್ಟ 20 ವರ್ಷಗಳ ಕಾಲ ನಿರಂತರವಾಗಿ ಸಂರಕ್ಷಿಸಬೇಕು. ಹೊಲದಲ್ಲಿನ ನೀರು ಹಾಗೂ ಮಣ್ಣು ಅತ್ಯಂತ ಪ್ರಮುಖ ಸಂಪನ್ಮೂಲವಾಗಿದೆ. ದೈನಿಕ, ಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕ ಆದಾಯ ನೀಡುವಂತೆ ಯೋಜನೆ ರೂಪಿಸಿಕೊಳ್ಳಬೇಕು. ಹೀಗಾದರೆ ಮಾತ್ರ ರೈತರಿಗೆ ನಿರಂತರ ಆದಾಯ ಸಾಧ್ಯವಿದೆ. ಪ್ರತಿದಿನ ಆದಾಯ ನೀಡಲು ಹಸುಗಳನ್ನು ಸಾಕಬೇಕು. ತಿಂಗಳಿಗೊಮ್ಮೆ ಲಾಭ ಪಡೆಯಲು ರೇಷ್ಮೆ ಸಾಕಾಣಿಕೆ ಕೈಗೊಳ್ಳಬೇಕು. ಮೂರು ತಿಂಗಳಿಗೊಮ್ಮೆ ಆದಾಯಕ್ಕಾಗಿ ಖುಷ್ಕಿ ಬೇಸಾಯ ಅವಶ್ಯವಾಗಿದೆ. ಆರು ತಿಂಗಳಿಗೊಮ್ಮೆ ಹಣ ಪಡೆಯಲು ತೆಂಗು ಬೆಳೆಯಬೇಕು. ವರ್ಷಕ್ಕೊಮ್ಮೆ ವರಮಾನ ಪಡೆಯಲು ಮಾವು, ಹುಣಸೆ ಮರಗಳನ್ನು ಬೆಳೆಸಬೇಕು. ಇವುಗಳ ಜತೆಗೆ ಜೇನುಸಾಕಾಣಿಕೆ, ಎರೆಹುಳು ಸಾಕಾಣಿಕೆ ಕೈಗೊಳ್ಳಬೇಕು. ಒಂದೇ ಸಂಪನ್ಮೂಲದಿಂದ ರೈತರ ಆದಾಯ ಹೆಚ್ಚುವುದಿಲ್ಲ. ಪ್ರತಿ ಬಾರಿ ಸರಕಾರವನ್ನು ದೂರುವ ಬದಲು ನಮ್ಮ ಹೊಲದಲ್ಲಿ ಯೋಜಿತ ರೀತಿಯಲ್ಲಿ ಮಿಶ್ರ ಕೃಷಿ ಕೈಗೊಳ್ಳಬೇಕು ಎಂದರು....

ಫೋಟೋ - http://v.duta.us/j5nfXgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Cy5MowAA

📲 Get Chitradurga News on Whatsapp 💬