ಯಶೋಗಾಥೆಗಳಿಗೆ ಇನ್ನಷ್ಟು ಸೇರ್ಪಡೆ; ಮನೆ, ಅಂಗಡಿಗಳಲ್ಲಿ ಮಳೆಕೊಯ್ಲು

  |   Dakshina-Kannadanews

ನಗರದ ಟಿ.ಟಿ. ರಸ್ತೆಯಲ್ಲಿರುವ ತಾರಾನಾಥ ಶೆಣೈ ಅವರ ಮನೆಯ ಬಾವಿಗೆ ಸರಳವಾಗಿ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಒಂದು ತಿಂಗಳ ಹಿಂದೆ ಈ ವ್ಯವಸ್ಥೆ ಮಾಡಿದ್ದು, ನೀರಿನ ಮಟ್ಟ ಹಿಂದೆಂದಿಗಿಂತಲೂ ಹೆಚ್ಚಳವಾಗಿದೆ.

ಈ ವಠಾರದಲ್ಲಿ ಸುಮಾರು ಏಳೆಂಟು ಮನೆಗಳಿದ್ದು, ಎಲ್ಲ ಮನೆಗಳಿಗೆ ಒಂದೇ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಬೇಸಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯಲ್ಲಿ ಸರಣಿ ಲೇಖನ ನೋಡಿ ಮನೆಯ ಬಾವಿಗೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಹಂಚಿನ ಮಹಡಿಯ ನೀರನ್ನು ಒಂದೆಡೆ ಸೇರಿಸಿ ಪೈಪ್‌ ಮುಖಾಂತರ ಬಾವಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ.

ಗಿಡಗಳಿಗೆ ಉಪಯುಕ್ತ

ಬಾರೆಬೈಲ್‌ ಮಿನೇಜಸ್‌ ಕೆಟರರ್ ಮಾಲಕ ಆಲ್ವಿನ್‌ ಮಿನೇಜಸ್‌ ಅವರು ತಮ್ಮ ಕ್ಯಾಟರಿಂಗ್‌ ಕಟ್ಟಡದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.

ಕೆಟರಿಂಗ್‌ನಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೂ ಮುಂದಿನ ದಿನಗಳಲ್ಲಿ ಸಮಸ್ಯೆ ಬಾರದಿರಲಿ ಎಂದು ಅಳವಡಿಸಿದ್ದೇನೆ. ಕ್ಯಾಟರಿಂಗ್‌ ಸುತ್ತಮುತ್ತಲು ಸಣ್ಣ ಗಿಡಗಳನ್ನು ನೆಟ್ಟಿದ್ದು, ಅದಕ್ಕೆ ನೀರಿನ ಆವಶ್ಯಕತೆ ಭರಿಸಲು ಈ ನೀರು ಸಾಕಾಗಬಹುದು ಎನ್ನುತ್ತಾರೆ ಆಲ್ವಿನ್‌ ಸ್ಲಾಪ್‌ನ ನೀರನ್ನು ಪೈಪ್‌ ಮೂಲಕ ಬಾವಿಗೆ ಬಿಡುವ ಮೂಲಕ ಸರಳವಾಗಿ ಅವರು ಅಳವಡಿಸಿದ್ದಾರೆ....

ಫೋಟೋ - http://v.duta.us/2HTglQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/byWD0wAA

📲 Get Dakshina Kannada News on Whatsapp 💬