ರಾಗಿ ಬೆಳೆಗೆ ಮಾರಕವಾದ ಬೆಂಕಿರೋಗ

  |   Tumkurnews

ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶ ವಾಗಿರುವ ಕಲ್ಪತರು ನಾಡಿನಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಈ ವರ್ಷವೂ ಬಿತ್ತನೆ ಸಮಯದಲ್ಲಿ ಮಳೆ ಕೊರತೆ ಕಂಡು ಬಂದಿದ್ದು, ಬಿತ್ತನೆ ಮಾಡುವ ಸಮಯದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಕೇವಲ ಶೇ. 44.45 ರಷ್ಟು ಬಿತ್ತನೆ ಯಾಗಿದ್ದರೆ. ರಾಗಿ ಶೇ.86 ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣದ ನಡುವೆ ತುಂತುರು ಮಳೆ ಬೀಳುತ್ತಿದ್ದು, ರಾಗಿ ಬೆಳೆ ಗರಿ ಕಟ್ಟುವ ವೇಳೆಯಲ್ಲಿ ತಂಪು ವಾತಾವರಣದಿಂದ ಬೆಳೆಗೆ ಬೆಂಕಿ ರೋಗ ಕಾಣಲಾರಂಭಿಸಿದ್ದು, ಒಳ್ಳೆಯ ಬೆಳೆ ಬರುತ್ತದೆ ಎಂದು ನಿರೀಕ್ಷಿಸಿರುವ ರೈತರು ಈಗ ಕಂಗಾಲಾಗುತ್ತಿದ್ದಾರೆ.

ಕೇವಲ 2,53,901 ಹೆಕ್ಟೇರ್‌ ಬಿತ್ತನೆ: ಈ ಬಾರಿಯ ಮುಂಗಾರು ಹಂಗಾಮಿಗೆ ಒಟ್ಟು 4,17,780 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಈ ಪೈಕಿ ಆಗಸ್ಟ್‌ ಅಂತ್ಯಕ್ಕೆ ಕೇವಲ 2,53,901 ಹೆಕ್ಟೇರ್‌ ಮಾತ್ರ ಅಂದರೆ ಶೇ.60.7 ರಷ್ಟು ಮಾತ್ರ ಬಿತ್ತನೆಯಾಗಿದೆ. ವಾಡಿಕೆ ಯಂತೆ ಆಗಸ್ಟ್‌ ಅಂತ್ಯಕ್ಕೆ ಶೇ.95ರಷ್ಟು ಬಿತ್ತನೆಯಾಗ ಬೇಕಿದ್ದು, ಈ ಬಾರಿ ಮಳೆ ಕೊರತೆಯಿಂದ ಶೇಂಗಾ ಬಿತ್ತನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಕೇವಲ ಶೇ.40 ರಷ್ಟು ಮಾತ್ರ ಕಡಿಮೆ ಬಿತ್ತನೆಯಾಗಿದೆ....

ಫೋಟೋ - http://v.duta.us/_LeL2gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/CiUC_wAA

📲 Get Tumkur News on Whatsapp 💬