ಲಕ್ಷ-ವೃಕ್ಷ ಬೆಳೆಸುವವರೆಗೂ ಆಂದೋಲನ ನಡೆಯಲಿ

  |   Mysorenews

ಮೈಸೂರು: ಪರಿಸರ ಸಂರಕ್ಷಣೆ ಕಾರ್ಯಕ್ರಮ ಹಾಗೂ ವನಮಹೋತ್ಸವ ಕೇವಲ ಭಾಷಣಕ್ಕೆ ಸೀಮಿತವಾಗದೇ, ಅದು ತನ್ನ ಮೂಲ ಉದ್ದೇಶ ಈಡೇರುವ ತನಕ ನಿರಂತರವಾಗಿ ನಡೆಯುತ್ತಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಎಚ್‌.ವಿ.ರಾಜೀವ್‌ ಸ್ನೇಹಬಳಗ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪತಂಜಲಿ ಯೋಗ ಶಿಕ್ಷಣ ಸಮಿತಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಜೆಪಿ ನಗರದ ಡಾ.ಪುಟ್ಟರಾಜ ಗವಾಯಿಗಳ ಕ್ರೀಡಾಂಗಣದಲ್ಲಿ “ಹಸಿರು ಮೈಸೂರಿಗಾಗಿ ಲಕ್ಷ-ವೃಕ್ಷ ಆಂದೋಲನ ಉದ್ಘಾಟಿಸಿ ಮಾತನಾಡಿದರು.

ಶಾಲೆಗಳಲ್ಲಿ ಪ್ರತಿ ವರ್ಷ ಆಚರಿಸುವ ವನಮಹೋತ್ಸವದಲ್ಲಿ ಒಂದು ಗಿಡ ನೆಟ್ಟು, ಭಾಷಣ ಮಾಡಿ ಕಾರ್ಯಕ್ರಮ ಮುಗಿಸಿ ಕೈತೊಳೆದುಕೊಳ್ಳುವಂತೆ, ಲಕ್ಷ-ವೃಕ್ಷ ಆಂದೋಲನ ಆಗಬಾರದು. ಬದಲಿಗೆ ಅದರ ಮೂಲ ಉದ್ದೇಶ ಈಡೇರುವ ತನಕ ನಡೆಯುತ್ತಿರಬೇಕು ಎಂದು ತಿಳಿಸಿದರು.

ಸಾಕಷ್ಟು ರೈತರು ಭತ್ತ ಬೆಳೆಯುವುದನ್ನು ನಿಲ್ಲಿಸಿರುವ ಕಾರಣ ಅಂತರ್ಜಲ ಕುಸಿದಿದೆ. ಭತ್ತದ ಬೆಳೆಗೆ ಜಮೀನಿನಲ್ಲಿ ಸದಾಕಾಲ 4 ಇಂಚು ನೀರನ್ನು ನಿಲ್ಲಿಸುವುದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ರೈತರು ಹೆಚ್ಚು ಭತ್ತದ ಕೃಷಿ ಮಾಡಬೇಕು. ನೀರು, ಗಾಳಿ, ಸಸ್ಯ ಅಮೂಲ್ಯ ಸಂಪತ್ತು, ಈಗಾಗಲೇ ಇವುಗಳನ್ನು ಸಾಧ್ಯವಾದಷ್ಟು ನಾಶಪಡಿಸಿದ್ದೇವೆ. ಇನ್ನಾದರೂ ಇದನ್ನು ಮುಂದಿನ ಪೀಳಿಗೆಗೆ ಕಾಪಾಡುವುದು ನಮ್ಮ ಕರ್ತವ್ಯ ಎಂದರು....

ಫೋಟೋ - http://v.duta.us/smeY8gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Ua09MAAA

📲 Get Mysore News on Whatsapp 💬