ವ್ಯಾಜ್ಯಗಳ ಇತ್ಯರ್ಥಕ್ಕಾಗಿ 14ಕ್ಕೆ ಲೋಕ ಅದಾಲತ್‌

  |   Chamarajanagarnews

ಚಾಮರಾಜನಗರ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ ರಾಜಿ ಆಗಬಹುದಾದ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಗೊಳಿಸಲು ಸೆ.14ರಂದು ಲೋಕ ಅದಾಲತ್‌ ನಡೆಯಲಿದೆ. ಕಕ್ಷಿದಾರರು ಇದರ ಪ್ರಯೋಜನ ಪಡೆಯಬೇಕು ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ ನ್ಯಾಯಾಧೀಶ ಜಿ.ಬಸವರಾಜ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಚಾಮರಾಜನಗರ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪಕ್ಷಗಾರರ ಒಪ್ಪಿಗೆ ಮೇರೆಗೆ ಲೋಕ್‌ ಅದಾಲತ್‌ನಲ್ಲಿ ಸಂಧಾನಕಾರರ ಸಮ್ಮುಖದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹು ಎಂದರು.

ಮೇಲ್ಮನವಿಗೆ ಅವಕಾಶ ಇಲ್ಲ: ಲೋಕ ಅದಾಲತ್‌ನಲ್ಲಿ ಕೌಟುಂಬಿಕ ವ್ಯಾಜ್ಯ, ಜೀವನಾಂಶದ ಪ್ರಕರಣ, ಮೋಟಾರ್‌ ವಾಹನ ಅಪಘಾತ ಪ್ರಕರಣ ಎಂಎಂಆರ್‌ಡಿ ಪ್ರಕರಣ, ಎಲ್ಲಾ ಕ್ರಿಮಿನಲ್‌ ಹಾಗೂ ಸಿವಿಲ್‌ ಪ್ರಕರಣ ಹಾಗೂ ಚೆಕ್‌ ಬೌನ್ಸ್‌ ಪ್ರಕರಣಗಳನ್ನು ರಾಜಿ ಮಾಡಿಕೊಂಡು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಅದಾಲತ್‌ನಲ್ಲಿ ಇತ್ಯರ್ಥವಾಗುವ ಪ್ರಕರಣಗಳಲ್ಲಿ ಯಾವುದೇ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಅದಾಲತ್‌ನಲ್ಲಿ ಬಗೆಹರಿಸಿಕೊಂಡ ಸಿವಿಲ್‌ ಪ್ರಕರಣಗಳಿಗೆ ಪಾವತಿಸಲಾದ ಶೇ.75ರಷ್ಟು ನ್ಯಾಯಾಲಯ ಶುಲ್ಕವನ್ನು ವಾಪಸ್ಸು ನೀಡಲಾಗುತ್ತದೆ. ಅದಾಲತ್‌ನಲ್ಲಿ ಶೀಘ್ರವಾಗಿ ಪ್ರಕರಣ ಬಗೆಹರಿಯಲಿದೆ ಎಂದು ವಿವರಿಸಿದರು....

ಫೋಟೋ - http://v.duta.us/Pv99UQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ChcRAgAA

📲 Get Chamarajanagar News on Whatsapp 💬