ವಾರ್ಡ್‌ಗಳಲ್ಲಿ ಸಂಚ‌ರಿಸಿ ಅಹವಾಲು ಆಲಿಕೆ

  |   Bijapur-Karnatakanews

ಮುದ್ದೇಬಿಹಾಳ: ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಪುರಸಭೆ ಅಧಿಕಾರಿಗಳ ಸಮೇತ ಭೇಟಿ ನೀಡಿ ಅಲ್ಲಿರುವ ಸೌಕರ್ಯ ಮತ್ತು ಆಯಾ ವಾರ್ಡ್‌ಗಳಿಗೆ ಅಗತ್ಯ ಅಭಿವೃದ್ಧಿ ಕಾರ್ಯಕ್ಕೆ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಪರಿಶೀಲಿಸುವ ವಾರ್ಡ್‌ ವಾಕ್‌-ವಾರ್ಡ್‌ ವಾಚ್ ವಿನೂತನ ಕಾರ್ಯಕ್ಕೆ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಚಾಲನೆ ನೀಡಿದ್ದಾರೆ.

ಗುರುವಾರ, ಶುಕ್ರವಾರ ಎರಡೂ ದಿನ ಬೆಳಗ್ಗೆ 6:30ರಿಂದ 9ರವರೆಗೆ ವಾರ್ಡ್‌ಗಳಲ್ಲಿ ಸಂಚರಿಸಿ ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಮತ್ತು ಪುರಸಭೆ ಒದಗಿಸಿರುವ ಮೂಲ ಸೌಕರ್ಯಗಳನ್ನು ಖುದ್ದು ಪರಿಶೀಲಿಸಿ ಅಗತ್ಯ ಇರುವ ಸ್ಥಳಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪುರಸಭೆ ಮುಖ್ಯಾಧಿಕಾರಿ ಎಸ್‌.ಎಫ್‌. ಈಳಗೇರ ಅವರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಶಾಸಕರು ಗುರುವಾರ ವಿದ್ಯಾನಗರ ಬಡಾವಣೆಗೆ ಭೇಟಿ ನೀಡಿ ರಸ್ತೆ, ಚರಂಡಿ, ವಿದ್ಯುತ್‌, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಪರಿಶೀಲಿಸಿದ್ದರು. ಅಲ್ಲಿನ ನಿವಾಸಿಗಳಿಂದ ಅಹವಾಲು ಆಲಿಸಿ ಬಡಾವಣೆ ಅಭಿವೃದ್ಧಿಗೆ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ದಾಖಲಿಸಿಕೊಂಡಿದ್ದರು.

ಶುಕ್ರವಾರ ಮಹಾಂತೇಶನಗರ, ವಾಲ್ಮೀಕಿನಗರ, ಡಾ| ಪದಕಿ ಬಡಾವಣೆ ಭೇಟಿ ನೀಡಿ ರಸ್ತೆ, ಚರಂಡಿ ವ್ಯವಸ್ಥೆ ಹೇಗಿದೆ? ಎಷ್ಟೆಲ್ಲ ರಸ್ತೆಗಳು, ಸರ್ಕಾರಿ ಆಸ್ತಿ ಅತಿಕ್ರಮಣ ಆಗಿವೆ. ಯಾರ್ಯಾರು ರಸ್ತೆ, ಚರಂಡಿ ಅತಿಕ್ರಮಿಸಿ ಕಟ್ಟಡ ಕಟ್ಟಿದ್ದಾರೆ. ಎಲ್ಲೆಲ್ಲಿ ಸರ್ಕಾರ ಹಾಗೂ ಪುರಸಭೆಯ ಆಸ್ತಿ ಇದೆ ಎನ್ನುವುದನ್ನು ಪರಿಶೀಲಿಸಿದರು. ಯಾವ್ಯಾವ ಸ್ಥಳಗಳಲ್ಲಿ ಏನೇನು ಅಭಿವೃದ್ಧಿ ಮಾಡಿದರೆ ಆಯಾ ಬಡಾವಣೆಗಳು ಸುಧಾರಣೆಗೊಳ್ಳುತ್ತವೆ ಎನ್ನುವುದನ್ನು ಅವಲೋಕಿಸಿದರು....

ಫೋಟೋ - http://v.duta.us/sUWqOwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/f5T_wgAA

📲 Get Bijapur Karnataka News on Whatsapp 💬