ವಿವಿಧ ಬೇಡಿಕೆ‌ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

  |   Bijapur-Karnatakanews

ವಿಜಯಪುರ: ಐಸಿಡಿಎಸ್‌ ಯೋಜನೆಗೆ ವೈಜ್ಞಾನಿಕವಾಗಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಂಗನವಾಗಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಭಾರತಿ ವಾಲಿ, ಅಂಗನವಾಡಿ ನೌಕರರ ಮೂಲಭೂತ ಹಾಗೂ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ನಿರಂತರ ನಿರ್ಲಕ್ಷ್ಯ ಮಾಡುತ್ತಿದೆ. ಮಕ್ಕಳ ಮನೋವಿಕಾಸ, ದೈಹಿಕ ಬೆಳವಣಿಗೆಗಳಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಪ್ರಮುಖ ಎಂಬುದನ್ನು ಹಲವು ಸಂಶೋಧನೆಗಳು ದೃಢ‌ಪಡಿಸಿವೆ. ಇಷ್ಟಿದ್ದರೂ ಸರ್ಕಾರ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.

ದೇಶದ ಮಹತ್ವದ ಯೋಜನೆ ಹಾಗೂ ಅಂನಗವಾಡಿ ಕೇಂದ್ರಗಳು ಅಡಕಗೊಂಡಿರುವ ಐಸಿಡಿಎಸ್‌ ಯೋಜನೆಗೆ ಅಗತ್ಯ ಅನುದಾನ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಇದು ಅಂಗನವಾಡಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಳವಳಕಾರಿ ಸಂಗತಿ ಎಂದರು.

ಸುನಂದಾ ನಾಯಕ ಮಾತನಾಡಿ, ಇತ್ತೀಚೆಗೆ ಪ್ರಕಟಿಸಲಾಗಿರುವ ಕರಡು ಶಿಕ್ಷಣ ನೀತಿ ಸಹ ಐಸಿಡಿಎಸ್‌ಗೆ ಮಾರಕವಾದ ಹಲವು ಕ್ರಮಗಳನ್ನು ಒಳಗೊಂಡಿದೆ. ಶಿಕ್ಷಣದ ವ್ಯಾಪಾರೀಕರಣದ ಮೇಲೆ ಈ ನೀತಿ ಒತ್ತು ಕೊಡುತ್ತಿದೆ. 3ರಿಂದ 8 ವರ್ಗಗಳವರೆಗಿನ ಮಕ್ಕಳನ್ನು ಶಾಲಾ ಶಿಕ್ಷಣದ ಒಂದು ಘಟ್ಟ ಎಂದು ಪರಿಗಣಿಸಲಾಗಿದೆ. ಶಾಲಾ ಪೂರ್ವ ಶಿಕ್ಷಣೋದ್ಯಮದಲ್ಲಿ 20 ಸಾವಿರ ಕೋಟಿ ರೂ. ವ್ಯವಹಾರ ನಡೆಯುವಂತೆ ಉತ್ತೇಜಿಸುವುದು ಈ ನೀತಿ ಉದ್ದೇಶ. ಹಲವು ರಾಜ್ಯಗಳಲ್ಲಿ ಈಗಾಗಲೇ ಸಮೂಹ ಅಥವಾ ಶಾಲಾ ಸಂಕೀರ್ಣಗಳ ಹೆಸರಿನಲ್ಲಿ, ಐದು ಅಂಗನವಾಡಿ ಕೇಂದ್ರಗಳು ಒಂದೇ ಕೋಣೆಯಲ್ಲಿ ಕೆಲಸ ಮಾಡುತ್ತಿವೆ, ಇದು ಅವೈಜ್ಞಾನಿಕ ಎಂದು ಹರಿಹಾಯ್ದರು....

ಫೋಟೋ - http://v.duta.us/0OeLKQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/G44NvAAA

📲 Get Bijapur Karnataka News on Whatsapp 💬