ವಾಹನ ಸಂಚಾರ ನಿಷೇಧಿಸಿ ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಪಂಚಾಯತ್‌

  |   Udupinews

ಕಟಪಾಡಿ: ಕುರ್ಕಾಲು-ಮಣಿಪುರ ಸಂಪರ್ಕದ ಬಹುಮುಖ್ಯ ರಸ್ತೆಯೊಂದು ನಡುವೆ ಕುಸಿದಿದ್ದು, ಭಾರೀ ಗಾತ್ರದ ಕಂದಕ ಸೃಷ್ಟಿಯಾಗಿದ್ದು, ವಾಹನ ಸಂಚಾರ ನಿಷೇಧಿಸಲಾಗಿರುತ್ತದೆ.

ಬೆಳ್ಮಣ್‌, ಶಿರ್ವ, ಶಂಕರಪುರ ಭಾಗದಿಂದ ಮಣಿಪುರ-ದೆಂದೂರುಕಟ್ಟೆ-ಅಲೆವೂರು ಮಣಿಪಾಲಕ್ಕೆ ಸಂಪರ್ಕವನ್ನು ಕಲ್ಪಿಸುವ ಹೆಚ್ಚು ಬಳಕೆಯಲ್ಲಿರುವ ಅತೀ ಶಾರ್ಟ್‌ ಕಟ್‌ ಆಗಿರುವ ಈ ರಸ್ತೆಯು ತೀವ್ರಗೊಂಡ ಮಳೆಯ ಪರಿಣಾಮ ಕುಸಿತಕ್ಕೊಳಗಾಗಿದೆ.

ಜಿಲ್ಲಾ ಪಂಚಾಯತ್‌ ರಸ್ತೆ ಇದಾಗಿದ್ದು, ಹೆಚ್ಚು ವಾಹನ ದಟ್ಟಣೆಯಿಂದ ಕೂಡಿದೆ. ಮಣಿಪುರ-ದೆಂದೂರು ಕಟ್ಟೆ-ಅಲೆವೂರು-ಉಡುಪಿಗೂ ಸಂಪರ್ಕವನ್ನು ಕಲ್ಪಿಸುವ ಹತ್ತಿರದ ರಸ್ತೆಯಾಗಿದ್ದು ರಾತ್ರಿ ಹಗಲೆನ್ನದೆ ಹೆಚ್ಚು ವಾಹನಗಳು ಸಂಚರಿಸುತ್ತಿರುತ್ತವೆ.

ಮಳೆಯ ತೀವ್ರತೆಗೆ ಹೆಚ್ಚಳಗೊಂಡಿರುವ ನೀರಿನ ಮಟ್ಟದಿಂದಾಗಿ ರಸ್ತೆ ನಿರ್ಮಾಣಕ್ಕೆ ಹಾಕಲಾಗಿದ್ದ ಅಡಿಪಾಯ ಕುಸಿದಿದೆ. ಹಾಗಾಗಿ ಮೆನ್ನಲ ನಾಗೇಶ್‌ ಜತ್ತನ್ನ ಮನೆಯ ಬಳಿಯಲ್ಲಿ ಮೇಲ್ಭಾಗದಲ್ಲಿನ ರಸ್ತೆಯ ಕಾಂಕ್ರೀಟ್‌ ಕುಸಿತಕ್ಕೊಳಗಾಗಿದೆ.

ಕುಸಿತದಿಂದ ದೊಡ್ಡ ಗಾತ್ರದಲ್ಲಿ ಕಂದಕ ನಿರ್ಮಾಣಗೊಂಡಿರುವ ಕಾರಣದಿಂದ ವಾಹನಗಳ ಸಂಚಾರ ಅಪಾಯಕಾರಿಯಾಗಿದೆ. ಎಚ್ಚೆತ್ತ ಕುರ್ಕಾಲು ಗ್ರಾಮ ಪಂಚಾಯತ್‌ ವಾಹನ ಸಂಚಾರವನ್ನು ನಿಷೇಧಿಸಿ ಬ್ಯಾನರ್‌ ಅಳವಡಿಸಿದ್ದು, ಬ್ಯಾರಿಕೇಡ್‌ ಇರಿಸಿ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಈ ಸ್ಥಳದಲ್ಲಿ ಮೊದಲು ಆಲದ ಮರವೊಂದು ಇದ್ದು, ರಸ್ತೆ ನಿರ್ಮಾಣದ ಸಂದರ್ಭ ತೆರವುಗೊಳಿಸಲಾಗಿದೆ. ಅದರ ಬುಡಭಾಗವನ್ನು ಸಮರ್ಪಕವಾಗಿ ನಿರ್ವಹಿಸದೆ ಇದೀಗ ಮಣ್ಣು ಕುಸಿದಿರಬಹುದೆಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ....

ಫೋಟೋ - http://v.duta.us/JgdWbAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/G7dVIgAA

📲 Get Udupi News on Whatsapp 💬