ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಸಹಜ ಸ್ಥಿತಿಗೆ

  |   Hassannews

ಸಕಲೇಶಪುರ: ಶಿರಾಡಿಘಾಟಿಯಲ್ಲಿ ಭೂ ಕುಸಿತವಾಗಿದೆ ಎಂಬ ಸುಳ್ಳು ಸುದ್ದಿ ಹರಡಿದ್ದರಿಂದ ಕೆಲ ಸಮಯ ಸಾರ್ವಜನಿಕರಲ್ಲಿ ಗೊಂದಲ ಉಂಟಾದ ಘಟನೆ ಶುಕ್ರವಾರ ನಡೆಯಿತು.

ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಮಾರನಹಳ್ಳಿ ಸಮೀಪ ಕೆಲವು ಬಂಡೆಗಳು ರಸ್ತೆ ಪಕ್ಕದಲ್ಲಿ ಈ ಹಿಂದೆ ಬಿದ್ದಿದ್ದು ಇನ್ನೊಂದು ಬಂಡೆ 20 ಅಡಿ ಎತ್ತರದಿಂದ ಬೀಳುವ ಸಾಧ್ಯತೆಯಿದ್ದು ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿ ಹರಡಿದ್ದರಿಂದ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು.

ಅಂತಿಮವಾಗಿ ಸ್ಥಳದಲ್ಲಿ ಯಾವುದೇ ಅಪಾಯ ಕಂಡು ಬಾರದಿದ್ದರಿಂದ ವಾಹನಗಳ ಸಂಚಾರ ರದ್ದುಗೊಳಿಸದೆ ಯಥಾ ಸ್ಥಿತಿಯಲ್ಲಿ ಮುಂದುವರಿಸಲಾಯಿತು.

ಕುಂಟುತ್ತಿರುವ ಚತುಷ್ಟಥ ರಸ್ತೆ ಕಾಮಗಾರಿ: ಹಾಸನದಿಂದ ಮಾರನಹಳ್ಳಿವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿ ಸುಮಾರು 3 ವರ್ಷಗಳಾಗುತ್ತಿದ್ದರೂ ಕಾಮಗಾರಿ ಶೇ.30 ಮುಗಿದಿಲ್ಲ.ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಗುಂಡಿಮಯವಾದ ಈ ರಸ್ತೆಯಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ಅಪಾಯಕಾರಿ ರಸ್ತೆಯಲ್ಲಿ ಸಂಚರಿಸುವುದು ಅನಿರ್ವಾಯ. ಚಾರ್ಮುಡಿ ಘಾಟಿ ಸಹ ಆಗಾಗ ಬಂದ್‌ ಆಗುವುದರಿಂದ ಅಲ್ಲಿ ಸಂಚರಿಸುವ ವಾಹನಗಳು ಈ ರಸ್ತೆಯನ್ನೇ ಆಶ್ರಯಿಸುವುದರಿಂದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಮತ್ತಷ್ಟು ಹೆಚ್ಚಾಗಿ ತೊಂದರೆಯಾಗುತ್ತಿದೆ.

ಫೋಟೋ - http://v.duta.us/06dYRQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/pYZxJgAA

📲 Get Hassan News on Whatsapp 💬