ಸಕಾಲ ವಿಳಂಬ ಮಾಡಿದ್ರೆ ನೋಟಿಸ್‌

  |   Bellarynews

ಬಳ್ಳಾರಿ: ಸಕಾಲ ಅಧಿನಿಯಮದಡಿ ಸೇವೆಗಳನ್ನು ವಿಳಂಬ ಮಾಡಿ ವಿಲೇವಾರಿ ಮಾಡುವ ಅಧಿಕಾರಿಗಳಿಗೆ ಸಕಾಲ ತಂತ್ರಾಂಶದ ಮುಖಾಂತರ ಆನ್‌ಲೈನ್‌ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯಡಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸೇವೆ ವಿಳಂಬ ವಿಲೇವಾರಿ ಮಾಡಿದ್ದಕ್ಕೆ ನೀಡಲಾದ ಕಾರಣ ಕೇಳಿ ನೋಟಿಸ್‌ ಜಾರಿಯಾದ ಅಧಿಕಾರಿಯೂ ಕೂಡ ಆನ್‌ಲೈನ್‌ ಮುಖಾಂತರ ಸಕ್ಷಮ ಪ್ರಾಧಿಕಾರಕ್ಕೆ ಉತ್ತರ ಸಲ್ಲಿಸಬೇಕು ಎಂದ ಅವರು, ಈ ತರಬೇತಿಯಲ್ಲಿ ನೀಡಲಾಗುವ ಪ್ರಾತ್ಯಕ್ಷಿಕೆಯನ್ನು ಗಮನದಲ್ಲಿಟ್ಟುಕೊಂಡು ಆಲಿಸಿ ಅದರಂತೆ ಕ್ರಮವಹಿಸಬೇಕು. ಸಕಾಲದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು. ನಿಗದಿಪಡಿಸಿದ ಅವಧಿಯೊಳಗೆ ಸೇವೆ ಒದಗಿಸದಿದ್ದಲ್ಲಿ ಯಾವ ರೀತಿ ಸಮಸ್ಯೆಯಾಗುತ್ತದೆ. ಅದನ್ನು ಅಧಿಕಾರಿಯ ಎಚ್ಆರ್‌ಎಂಎಸ್‌ನೊಂದಿಗೆ ಅಟ್ಯಾಚ್ ಮಾಡಲಾಗುತ್ತಿದ್ದು, ಬಡ್ತಿ ಸಂದರ್ಭದಲ್ಲಿಯೂ ಸಮಸ್ಯೆ ಉಂಟಾಗುತ್ತದೆ ಎಂದು ವಿವರಿಸಿದರು.

ಇಡಿ ದೇಶದಲ್ಲಿಯೇ ಅತ್ಯಂತ ಮಾದರಿಯಾಗಿರುವ ಈ ಸಕಾಲ ಸೇವೆಯನ್ನು ಬಾಂಗ್ಲಾದೇಶ ಕೂಡ ಅಳವಡಿಸಿಕೊಂಡಿದೆ. ಆರಂಭದಲ್ಲಿ 278 ಸೇವೆಗಳಿದ್ದವು. ಈಗ 1091 ಸೇವೆಗಳು ಈ ಸಕಾಲದಡಿ ಲಭ್ಯವಿವೆ. ಈ ಮುಂಚೆ ಮ್ಯಾನ್ಯುವಲ್ ಆಗಿದ್ದ ಸೇವೆಗಳು ಈಗ ಆನ್‌ಲೈನ್‌ (ಸೇವಾಸಿಂಧು) ಮೂಲಕ ಲಭ್ಯವಿವೆ ಎಂದರು....

ಫೋಟೋ - http://v.duta.us/RMUM-wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/vkWVcAAA

📲 Get Bellary News on Whatsapp 💬