ಸಂತ್ರಸ್ತರ ನೆರವಿಗೆ ಮಾನವೀಯ ಸೇವಾ ಸಂಸ್ಥೆ ಸಿದ್ಧ

  |   Belgaumnews

ರಾಮದುರ್ಗ: ನೆರೆ ಸಂತ್ರಸ್ತರಿಗೆ ನೆರವಾಗುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಿಕ್ಕಿ ಹಾಕಿಕೊಂಡ ಜನತೆ ರಕ್ಷಣೆಗೆ ಧಾವಿಸುವ ನಿಟ್ಟಿನಲ್ಲಿ ಮಾನವೀಯ ಸೇವಾ ಸಂಸ್ಥೆ ಸದಾ ಸಿದ್ಧವಾಗಿದ್ದು, ರಾಮದುರ್ಗ ಪಟ್ಟಣದಲ್ಲಿ ಕಚೇರಿ ತೆರೆಯಲಾಗಿದೆ ಎಂದು ಮಾನವೀಯ ಸೇವಾ ಸಂಸ್ಥೆ ಮುಖಂಡ ಯಾಶೀನ ಮಕಾಂದಾರ ಹೇಳಿದರು.

ಸ್ಥಳೀಯ ಪ್ರಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 17 ವರ್ಷಗಳಿಂದ ಮಾನವೀಯ ಸೇವಾ ಸಂಸ್ಥೆಯ ಮೂಲಕ ಇಂತಹ ಕೆಲಸಗಳನ್ನು ಮಾಡಿಕೊಂಡು ಬರಲಾಗುತ್ತಿದೆ. 2009ರಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಸಂಸ್ಥೆಯ ಮೂಲಕ ಸಾಧ್ಯವಾದ ಮಟ್ಟಿಗೆ ಸಂತ್ರಸ್ತರ ನೆರೆವಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ ಎಂದರು.

ನೆರೆ ಸಂತ್ರಸ್ತರಿಗೆ ಬೆಳಗಾವಿ ಮದೀನಾ ವೆಲ್ಪರ ಸೊಸೈಟಿ ಸಹಯೋಗದಲ್ಲಿ ಈಗಾಗಲೇ ಆಹಾರವನ್ನು ವಿತರಿಸಲಾಗಿದೆ. ನೆರೆಯಿಂದಾಗಿ ಎಷ್ಟೋ ಕುಟುಂಬಗಳ ಜನ ಪರಿಹಾರ ಕೇಂದ್ರದಲ್ಲಿದ್ದರು. ಈಗ ಪರಿಹಾರ ಕೇಂದ್ರವನ್ನು ಖಾಲಿ ಮಾಡಿದ್ದು, ಸಂಸ್ಥೆಯಿಂದ ಸರ್ವೇ ಕಾರ್ಯವನ್ನು ಮಾಡಿ ಅವರಿಗೆ ಮನೆ ಇಲ್ಲದೆ ಇದ್ದರೆ ಅಂತವರಿಗೆ ಸಂಸ್ಥೆಯಿಂದ ತಾತ್ಕಾಲಿಕ ಶೆಡ್‌ ನಿರ್ಮಾಣ ಮಾಡಿ ಶ್ರಮಿಸಲಾಗುವದು ಎಂದು ತಿಳಿಸಿದರು.

ಅಲ್ಲದೇ ಪ್ರವಾಹದ ಸಂದರ್ಭದಲ್ಲಿ ಮನೆಯಲ್ಲಿನ ದಾಖಲಾತಿಗಳು ಕೊಚ್ಚಿಕೊಂಡು ಹೋಗಿದ್ದು, ಕಾರಣ ಅಂತಹ ಅತಂತ್ರ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಮಾನವೀಯ ಸೇವಾ ಸಂಸ್ಥೆ ಹುಟ್ಟು ಹಾಕಿ ಅವರಿಗೆ ನೆರವು ನೀಡಲು ಮುಂದಾಗುತ್ತಿದೆ. ಪಟ್ಟಣದ ಬೆಳಗಾವಿ ರಸ್ತೆಯ ನವೀಪೇಟದಲ್ಲಿ ಕಚೇರಿಯನ್ನು ತೆರೆಯಲಾಗಿದ್ದು, ನೆರೆ ಸಂತ್ರಸ್ತರು ಏನೇ ಸಮಸ್ಯೆಗಳಿದ್ದರೂ ಕಚೇರಿಗೆ ಬಂದು ತಿಳಿಸಿದಲ್ಲಿ ಸಾಧ್ಯವಾದ ಮಟ್ಟಿಗೆ ಪರಿಹರಿಸಲು ಮುಂದಾಗುವದಾಗಿ ಹೇಳಿದರು....

ಫೋಟೋ - http://v.duta.us/Sl2Z6wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/q0kEhwAA

📲 Get Belgaum News on Whatsapp 💬